ಹುಬ್ಬಳ್ಳಿ: ಬಿಎನ್ಐ ವತಿಯಿಂದ ಜೂನ್ 21 ರಂದು ಬೆಳಿಗ್ಗೆ 11 ಕ್ಕೆ ಕಿಚನ್ ಓ ಕಲ್ಚರ್ ಬಿಜ್ ಉತ್ಸವ-2025 ನ್ನು ಇಲ್ಲಿನ ಗೋಕುಲರಸ್ತೆಯ ಡೆನಿಸನ್ಸ್ ಹೊಟೆಲ್’ನಲ್ಲಿ ಆಯೋಜಿಸಲಾಗಿದೆ ಎಂದು ಬಿಎನ್ಐ ಪ್ರಾದೇಶಿಕ ಮುಖ್ಯಸ್ಥ ಶ್ರೇಯಸ್ಸ್ ನಾಡಕರ್ಣಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಅಂದು ಬೆಳಿಗ್ಗೆ ಚೈನ್ ಮ್ಯಾನೇಜ್ಮೆಂಟ್ ಎಕ್ಸಪರ್ಟ್ ಡಾ.ಪವನ್ ಅಗರವಾಲ್ ಅವರಿಂದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಅಂದು ಬಿಎನ್ಐ ವ್ಯಾಪಾರ ವಹಿವಾಟಿನಲ್ಲಿ ಅತ್ಯುತ್ತಮ ಸಾಧನೆ ತೋರಿದ ಉದ್ಯಮಿಗಳೊಂದಿಗೆ ಸಂವಾದ ನಡೆಯಲಿದೆ. ಇದು ಪರಸ್ಪರ ಸ್ನೇಹ ಸಂಬಂಧ ವೃದ್ದಿಸುವ ವೇದಿಕೆಯಾಗಲಿದೆ ಎಂದರು.
ಈ ಉತ್ಸವಕ್ಕೆ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಬಿಎನ್ಐ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ 7 ಕ್ಕೆ ಬಾಲಿವುಡ್ ನಟಿ ನೇಹಾ ದುಫಿಯಾ ಅವರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸುಮನ್ ಜೈನ್, ಶ್ರೀಕಾಂತ್ ಯಾಕಾಪುರ, ವಿಜಯಕುಮಾರ್ ಭೀಮಯ್ಯ, ಮಾಲತೇಶ ಕಮ್ಮಾರ, ವಿಪುಲ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ವರದಿ: ಸುಧೀರ್ ಕುಲಕರ್ಣಿ




