Ad imageAd image

ಅದ್ದೂರಿಯಾಗಿ ಉದ್ಘಾಟನೆ ಗೊಂಡ ಕಿತ್ತೂರು ಚನ್ನಮ್ಮನವರ 200 ನೇ ವಿಜಯೋತ್ಸವ

Bharath Vaibhav
ಅದ್ದೂರಿಯಾಗಿ ಉದ್ಘಾಟನೆ ಗೊಂಡ ಕಿತ್ತೂರು ಚನ್ನಮ್ಮನವರ 200 ನೇ ವಿಜಯೋತ್ಸವ
WhatsApp Group Join Now
Telegram Group Join Now

ಕಿತ್ತೂರು:- ಕ್ರಾಂತಿನಾಡು ಕಿತ್ತೂರಿನಲ್ಲಿ ಇಂದು ವೀರರಾಣಿ ಚನ್ನಮ್ಮನವರ 200 ನೇ ವಿಜಯೋತ್ಸವವು ಇಂದು ಕ್ರಾಂತಿನಾಡು ಕಿತ್ತೂರಿನಲ್ಲಿ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವರು ಆದ ಲಕ್ಶ್ಮೀ ಹೆಬ್ಬಾಳ್ಕರ್ ಹಾಗೂ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ನೇತೃತ್ವದಲ್ಲಿ ಶಾಸಕರು ಆದ ಮಹಾಂತೇಶ್ ಕೌಜಲಗಿ, ರಾಜು ಶೇಟ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಚನ್ನರಾಜು ಹಟ್ಟಿ ಹೊಳಿ, ಮಾಜಿ ಶಾಸಕರಾದ ಮಹಾನಂತೇಶ್ ದೊಡ್ಡಗೌಡರು, ಸಂಜಯ ಪಾಟೀಲ್ ಹಾಗೂ ಸುರೇಶ್ ಮಾರಿಹಾಳ ಸಮ್ಮುಖದ ಪಾಲ್ಗೊಳ್ಳುವಿಕೆಯಲ್ಲಿ ಅದ್ದೂರಿಯಾಗಿ ಉದ್ಘಾಟನೆ ಗೊಂಡಿತು.

ಈ ಸಂದರ್ಭದಲ್ಲಿ ರಾಣಿ ಚನ್ನಮ್ಮನವರ ಮೂರ್ತಿಗೆ ಎಲ್ಲರೂ ಸಹ ಮಾಲಾರ್ಪಣೆ ಮಾಡಿದರು, ವಿಜಯೋತ್ಸವದ ನಿಮಿತ್ಯ ಬೆಳಗಾವಿ ಜಿಲ್ಲಾಧಿಕಾರಿ ಮಹಮದ್ ರೋಷನ್ ಮಾರ್ಗದರ್ಶನದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮೆರವಣಿಗೆಗಳ ಮೂಲಕ ನಡೆಸಲಾಯಿತು

ಸಾಂಸ್ಕೃತಿಕ ಹಾಗೂ ಜಾನಪದ ಕಲಾ ತಂಡಗಳು ಮೆರವಣಿಗೆ ಮಾಡಿದವು. ಈ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಸಂದರ್ಶನ ನಡೆಸಿ ಕಿತ್ತೂರಿನ ವಿಜಯೋತ್ಸವದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು. ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ್ ಗುಳೇಡ್ ಅವರ ಮಾರ್ಗದರ್ಶನದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಿತ್ತೂರು ನಾಡಿನ 5 ತಾಲ್ಲೂಕುಗಳ ಅಭಿಮಾನಿಗಳು ಅದ್ದೂರಿಯಾಗಿ ಪಾಲ್ಗೊಂಡರು. ಒಟ್ಟಾರೆ 3 ದಿವಸಗಳ ಕಾಲ ನಡೆಯುವ ಈ 200 ನೇ ವಿಜಯ ಉತ್ಸವಕ್ಕೆ ಇಂದು ಚಾಲನೆ ದೊರಕಿದೆ.

  ವರದಿ:-  ಬಸವರಾಜು. 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!