ಬಾದಾಮಿ: ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿದಾಗ ಮಾತ್ರ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾದ್ಯ ಈ ನಿಟ್ಟಿನಲ್ಲಿ 1994 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಕಿತ್ತೂರ ಚನ್ನಮ್ಮನವರ ಹೆಸರಿನಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭಿಸಿಲಾಯಿತು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎನ್.ಡಿ ದೊಡ್ಡನಿಂಗಪ್ಪನವರ ಹೇಳಿದರು
ಅವರು ರಂಗನಾಥ ನಗರದಲ್ಲಿರುವ ಕಿತ್ತೂರ ಚನ್ನಮ್ಮ ಪ್ರಾಥಮಿಕ ಶಾಲೆಯ 21 ನೇ ವಾರ್ಷಿಕೋತ್ಸವ, ಪ್ರತಿಭಾ ಪರಸ್ಕಾರ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ ಇಂದು ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಶಾಲೆಗಳಲ್ಲಿ ಮಕ್ಕಳ ಹೆಚ್ಚಿನ ಜ್ಞಾನಾಭಿವೃದ್ದಿಗೆ ಸ್ಮಾರ್ಟ್ ಕ್ಲಾಸ ಇರಬೇಕು ಎಂದು ಈ ವರ್ಷ ಸ್ಮಾರ್ಟ್ ಕ್ಲಾಸ ಮೂಲಕ ತರಬೇತಿ ನೀಡುತ್ತಿದ್ದೇವೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೂಡುಬಿದರೆ, ಧಾರವಾಡ ಶಿಕ್ಷರಿಂದ ತರಬೇತಿ ನೀಡಲಾಗುತ್ತದೆ ಪಾಲಕರು ಮಕ್ಕಳ ಸರ್ವಾಂಗೀಣ ಪ್ರಗತಿಗೆ ನಮ್ಮ ಶಾಲೆಗೆ ಪ್ರವೇಶ ಪಡೆಯಬೇಕೆಂದು ಹೇಳಿದರು
ಶಿಕ್ಷಣ ಸಂಯೋಜಕ ಬಾಲು ಹಳ್ಳಿ ಮಾತನಾಡಿ ಶಿಕ್ಷಣದೊಂದಿಗೆ ಸಂಸ್ಕೃತಿ ಆಚಾರ ವಿಚಾರಗಳು ಮಹತ್ವದ್ದಾಗಿದ್ದು ಈ ಹಿಂದೆ ಗುರುಕುಲ ಪದ್ಧತಿಯು ಇಂದು ಪ್ರಸ್ತುತವಾಗಿದೆ ಎಂದರು,
ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷರಾದ ಎಂ.ಡಿ ಯಲಿಗಾರ ಹಾಗೂ ಡಾ. ಬಸವರಾಜ ಬೆಳವಟಗಿ ಮಾತನಾಡಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತಮವಾದ ಸ್ವಂತ ಕಟ್ಟಡ, ನುರಿತ ಅನುಭವಿಕ ಶಿಕ್ಷವೃಂದ ನಮ್ಮ ಶಾಲೆಯಲ್ಲಿದೆ ಪಾಲಕರು ಮಕ್ಕಳ ಹೊಂ ವರ್ಕ ಪರಿಶೀಲನೆ ಮಾಡಿ ಅಭ್ಯಾಸ ಮಾಡಿಸಬೇಕು ಅಂದಾಗ ಮಾತ್ರ ವಿದ್ಯೆ ಬೆಳಕು ಮೂಡುವುದು ಎಂದರು
ಕಾರ್ಯಕ್ರಮದಲ್ಲಿ ಕಿತ್ತೂರ ಚನ್ನಮ್ಮ ಮಹಿಳಾ ಬ್ಯಾಂಕ್ ಅಧ್ಯಕ್ಷೆ ರೇಖಾ ಶಿರೂರ, ಸಿ.ಆರ್.ಪಿ ಬಡಿಗೇರ, ಸಂಸ್ಥೆಯ ನಿರ್ಧೇಶರಾದ ಎನ್.ಡಿ ದೂಳಪ್ಪನವರ, ಸಿದ್ದು ಗುಡುಗುಡಿ, ಮಳಿಶಾಂತ ಬಿಳೆಬಾಳ, ಹುಲಗಪ್ಪ ಭೋವಿ, ಮಹಾಂತೇಶ ಮಡಿವಾಳರ, ಬಸವರಾಜ್ ಉಳ್ಳಾಗಡ್ಡಿ, ಮುಖ್ಯಾಧ್ಯಾಪಕ ಪ್ರಶಾಂತ ಕುಲಕರ್ಣಿ ಸೇರಿದಂತೆ ಕಿತ್ತೂರ ಚನ್ನಮ್ಮ ಮಹಿಳಾ ಬ್ಯಾಂಕ್ ನಿರ್ಧೇಶಕರು, ಶಾಲಾ ಶಿಕ್ಷಕಿಯರು, ಶಿಕ್ಷಕೇತರ ಸಿಬ್ಬಂದಿಗಳು ಹಾಜರಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ




