Ad imageAd image

SSLC ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಗೆ ಕಿತ್ತೂರು ಫಸ್ಟ್

Bharath Vaibhav
SSLC ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಗೆ ಕಿತ್ತೂರು ಫಸ್ಟ್
WhatsApp Group Join Now
Telegram Group Join Now

SSLC ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆಗೆ ಕಿತ್ತೂರು ಫಸ್ಟ್ ..! ತಾಲ್ಲೂಕಿಗೆ ವೀರಾಪುರ ಸರ್ಕಾರಿ ಪ್ರೌಢಶಾಲೆ ಬೆಸ್ಟ್ ಅಂದ್ರು ಗಣ್ಯರು

ಕಿತ್ತೂರು:ಈ ಭಾರಿ ಕ್ರಾಂತಿ ನೆಲ ಕಿತ್ತೂರು ತಾಲ್ಲೂಕು ಇಡೀ ಬೆಳಗಾವಿ ಜಿಲ್ಲೆಯಲ್ಲಿ SSLC ಫಲಿತಾಂಶದಲ್ಲಿ ಪ್ರಥಮ ಸ್ಥಾನ ಗಳಿಸಿ ಸೈ ಎನಿಸಿಕೊಂಡರೇ, ವೀರಾಪುರ ಸರ್ಕಾರಿ ಪ್ರೌಢಶಾಲೆ ಕಿತ್ತೂರು ತಾಲ್ಲೂಕಿನಲ್ಲಿಯೇ ಭೇಷ್ ಎನಿಸಿಕೊಂದಿದ್ದಾರೆ. ಇದರ ನಿಮಿತ್ಯವಾಗಿ ಮೊನ್ನೆ ಕಿತ್ತೂರು ಕೋಟೆ ಆವರಣದಲ್ಲಿ SSLC ಫಲಿತಾಂಶದಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕಿತ್ತೂರು ಕ್ಷೇತ್ರದ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ, ಪೂಜ್ಯ ರಾಜಗರು ಸಂಸ್ಥಾನ ಮಡಿವಾಳ ರಾಜಯೋಗಿನ್ದ್ರ ಸ್ವಾಮೀಜಿ ಹಾಗೂ ನಿಚ್ಚನಕಿ ಮಠದ ಪಂಚಾಕ್ಷರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ, ಕಿತ್ತೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚೆನ್ನಬಸಪ್ಪ ತುಬಾಕದ, ಪ.ಪಂ ಅದ್ಯಕ್ಶ ಮಾರಿಹಾಳ ನೇತೃತ್ವದಲ್ಲಿ ಕ್ಷೇತ್ರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು ಹಾಗೂ ಮುಖ್ಯಗುರುಗಳನ್ನು ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ದೇವಲಾಪುರ ಸರ್ಕಾರಿ ಶಾಲೆಯ ರೂಪ ಪಾಟೀಲ್ ಹಾಗೂ ಕಿತ್ತೂರು ತಾಲ್ಲೂಕಿಗೆ ಪ್ರಥಮ ಸ್ಥಾನ ಬಂದ ಖೋದಾನಪುರ ಸರ್ಕಾರಿ ಶಾಲೆಯ ಸ್ವಾತಿ ಪಟ್ಟೆದ್ ಕಿತ್ತೂರು ತಾಲ್ಲೂಕಿನಲ್ಲಿಯೇ ಉತ್ತಮ ಸಾಧನೆ ಮಾಡಿದ ಮಲಪ್ರಭಾ ನದಿ ದಂಡೆಯ ಸರ್ಕಾರಿ ಪ್ರೌಢಶಾಲೆಯ ಲಕ್ಸ್ಮಿ ಅಂಬಡಗಟ್ಟಿ ಹಾಗೂ ಸೌಭಾಗ್ಯ ವಸ್ತ್ರದ ಅವರನ್ನು ಹಾಗೂ ಪ್ರದಾನ ಗುರುಗಳು ಆದ ಸವಿತಾ ಕೋಲಕಾರ್ ಅವರನ್ನು ಕಿತ್ತೂರು ತಾಲ್ಲೂಕು ಆಡಳಿತ ವತಿಯಿಂದ ಹೃದಯಪೂರ್ವಕವಾಗಿ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ 2025 -26 ನೇ ಸಾಲಿನ Sslc ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಮ್ಮ ಚಿತ್ತ , ಶತಕದತ್ತ ಎಂಬ Sslc ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು, ಬಿ.ಇ. ಓ ಹಾಗೂ ಕಿತ್ತೂರು ಶಾಸಕರನ್ನು ಕಿತ್ತೂರು ಪಟ್ಟಣ ಪಂಚಾಯಿತಿ ಆಡಳಿತ ಹಾಗೂ ವಿವಿಧ ಸಂಘಟನೆಗಳು ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಎಲ್ಲಾ ಗಣ್ಯರು ಕಿತ್ತೂರು ಬಿ.ಇ. ಓ ಹಾಗೂ ಸರ್ಕಾರಿ ಶಾಲಾ ಶಿಕ್ಷಕರು, ಸಂಪನ್ಮೂಲ ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ಅತಿಥಿಗಳಾಗಿ ಕಾಂಗ್ರೆಸ್ ಮುಖಂಡೆ ರೋಹಿಣಿ ಬಾಬಾ ಸಾಹೇಬ್ ಪಾಟೀಲ್, ಬೈಲಹೊಂಗಲ ಬಿ.ಇ. ಓ ಪ್ಯಾಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ಕಿರಣ್ ಘೋರ್ಪಡೆ, ಕಿತ್ತೂರು ಪೊಲೀಸ್ ಠಾಣೆಯ ಸಿ.ಪಿ.ಐ ಶಿವಾನಂದ ಗುಡಗನಟ್ಟಿ, pwd ಉಪ ವಿಬಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಆದ ಮೀರಜಕರ್ ಹಾಗೂ ಹಿರಿಯ ಶಿಕ್ಷಕ ಡಾ. ಶೇಖರ್ ಹಲಸಗಿ ಹಾಗೂ ಎಲ್ಲಾ ಸಿ.ಆರ್.ಪಿ ಗಳು, ಶಿಕ್ಷಕರು, ಪೋಷಕರನ್ನು ಸ್ವಾಗತ ಮಾಡಲಾಯಿತು.

ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರೊಂದಿಗೆ ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಮಾತನಾಡಿದರು. ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿಯೇ ಕಿತ್ತೂರು ತಾಲ್ಲೂಕು ಪ್ರಥಮ ಸಾಧನೆ ಗಳಿಸಿ, ಕಿತ್ತೂರು ತಾಲ್ಲೂಕಿನಲ್ಲಿಯೇ ವೀರಾಪುರ ಸರ್ಕಾರಿ ಪ್ರೌಢಶಾಲೆ ಉತ್ತಮ ಸಾಧನೆಗೈದಿದಕ್ಕೆ ಕಿತ್ತೂರು ತಾಲ್ಲೂಕು ಗಣ್ಯರು ಹಾಗೂ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ವರದಿ: ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!