Ad imageAd image

ಚಿಂಚೋಳಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಆಚರಣೆ

Bharath Vaibhav
ಚಿಂಚೋಳಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಆಚರಣೆ
WhatsApp Group Join Now
Telegram Group Join Now

ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ತಾಲೂಕು ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ 2ನೇ ವರ್ಷದ ಜಯಂತೋತ್ಸವ ಕಾರ್ಯಕ್ರಮ ಅಂಗವಾಗಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಹಾಗೂ ವೀರಶೈವ ಲಿಂಗಾಯತ ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನುಕಲಬುರಗಿ ನಗರದ ಮನ್ನೂರ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಫಾರುಕ್ ಮನ್ನೂರ, ಅವರು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಭಾರತ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ವನಿತೆ ಕಿತ್ತೂರಾಣಿ ಚೆನ್ನಮ್ಮ ಅವರು ಭಾರತಕ್ಕೆ ಮತ್ತು ಕರ್ನಾಟಕ್ಕೆ ಬ್ರಿಟಿಷರು ವಿರುದ್ಧ ಹೋರಾಡಿದ್ದಾರೆ.

ಕಿತ್ತೂರು ರಾಣಿ ಚೆನ್ನಮ್ಮನ ಅವರ ತತ್ವ ಸಿದ್ಧಾಂತವನ್ನು ನಾವೆಲ್ಲರೂ ಅಳುವಳಿಸು ಕೊಡಬೇಕು ಕಿತ್ತೂರಾಣಿ ಚೆನ್ನಮ್ಮನವರ ತತ್ವ ಸಿದ್ಧಾಂತಗಳನ್ನು ನಾವೆಲ್ಲ ಮೈಗೊಡಿಸುಕೊಳ್ಳಬೇಕು ಇಂದಿನ ಎಲ್ಲಾ ಮಹಿಳೆಯರು ಕಿತ್ತೂರಾಣಿ ಚೆನ್ನಮ್ಮನ ಆದರ್ಶೆಯಂತೆ ಆಗಬೇಕು ಮತ್ತು ಈಗಿನ ಮಕ್ಕಳು ಕಿತ್ತೂರಾಣಿ ಚೆನ್ನಮ್ಮನವರ ಜೀವನ ಚರಿತೆ ಯನ್ನು ಎಲ್ಲರೂ ತಿಳಿದುಕೊಂಡು ಹೇಳಿದರು ಕಿತ್ತೂರಾಣಿ ಚೆನ್ನಮ್ಮನ ಅವರ ಜಯಂತಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಇಟ್ಟಿದ್ದು ಬಹಳಷ್ಟು ಸಂತೋಷ ವಿಷಯವಾಗಿದ್ದು ಹೇಳಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಚಿಮ್ಮಾಇದಲಾಯಿ ಗ್ರಾಮದ ಪರಮ ಪೂಜಾ ಶ್ರೀಗಳ ವಿಜಯಮಹಾಂತ ಮಹಾಸ್ವಾಮಿಗಳು, ಐನಾಪೂರ ಗ್ರಾಮದ ಪೂಜ್ಯ ಶ್ರೀಗಳಾದ ಪಂಚಾಕ್ಷರಿ ದೇವರು, ದಾವಣಗೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣ ಅಧಿಕಾರಿಗಳಾದ ಗುರುಪ್ರಸಾದ್ ಕವಿತಾಳ, ಚಿಂಚೋಳಿ ಪುರಸಭೆ ಅಧ್ಯಕ್ಷರಾದ ಆನಂದ್ ಟೈಗರ್, ತಾಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಮೊಮ್ಮದ್ ಗಫರ್, ಚಂದಾಪುರ ಸರ್ಕಾರಿ ಆಸ್ಪತ್ರೆ ಆಡಳಿತ ಅಧಿಕಾರಿಗಳಾದ ಡಾ. ಸಂತೋಷ್ ಪಾಟೀಲ್, ಬಿಸಿಎಂ ಅಧಿಕಾರಿಗಳಾದ ಅನುಸೂಯಾ ಚವ್ಹಾಣ. ವೀರಶೈವ ಲಿಂಗಾಯತ ಸಮಾಜದ ತಾಲೂಕ ಗೌರವಾಧ್ಯಕ್ಷರಾದ ರಮೇಶ್ ಪಡಶೆಟ್ಟಿ ಐನಾಪೂರ್, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ವಿಶ್ವನಾಥ್ ಪಾಟೀಲ್ ಪೋಲಕಪಳ್ಳಿ, ಮಲ್ಲಿಕಾರ್ಜುನ್ ಕೇಶ್ವರ್, ಜಗದೀಶ್ ಸಜ್ಜನ್, ವೀರಶೈವ ಲಿಂಗಾಯತ ಸಮಾಜದ ತಾಲೂಕ ಅಧ್ಯಕ್ಷರಾದ ಸಂಜೀವ್ ಕುಮಾರ್ ಪಾಟೀಲ್, ತಾಲೂಕ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ಕ್ಷೇತ್ರ ಧರ್ಮಸ್ಥಳದ ತಾಲೂಕ ಮುಖ್ಯಸ್ಥರಾದ ಗೋಪಾಲ್ ಜಿ, ಅವರು ವೇದಿಕೆ ಮೇಲೆ ಇದ್ದರು.

ಕಾರ್ಯಕ್ರಮ ನಿರೂಪಣೆಯನ್ನು ಕಾಶಿನಾಥ ಮಡಿವಾಳ, ಅವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ಬಾಂಧವರು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಕ್ಕಾಗಿ ಸನ್ಮಾನ ಮಾಡಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ತಾಲೂಕಾ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ: ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!