18ನೇ ಆವೃತ್ತಿಯ ಐಪಿಎಲ್ನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಪ್ರದರ್ಶನ ನೀಡಿ ಪ್ಲೇಆಫ್ಗೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಈ ಬಾರಿ ಚೊಚ್ಚಲ ಕಪ್ ಗೆಲ್ಲುವ ಭರವಸೆ ನೀಡಿದೆ.
ಹೊಸ ನಾಯಕ ರಜತ್ ಪಾಟಿದಾರ್ ನೇತೃತ್ವದಲ್ಲಿ ಮೈದಾನಕ್ಕಿಳಿದಿದ್ದ ಆರ್ಸಿಬಿ ಈ ವರೆಗೂ ಆಡಿದ 12 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು 1 ಪಂದ್ಯ ರದ್ದ್ಗೊಂಡಿದ್ದು 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಸದ್ಯ ಆರ್ಸಿಬಿ ಲೀಗ್ ಹಂತದ ಎರಡು ಪಂದ್ಯಗಳು ಆಡುವುದು ಬಾಕಿ ಇದೆ. ನಾಳೆ ನಡೆಯಲಿರುವ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಿದರೇ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಗೆದ್ದು ಅಗ್ರಸ್ಥಾನಕ್ಕೆ ತಲುಪುವ ಗುರಿ ಹೊಂದಿದೆ.
ಇದಕ್ಕಾಗಿ ಆರ್ಸಿಬಿ ಎಲ್ಲ ರೀತಿಯಲ್ಲೂ ತಯಾರಿ ನಡೆಸಿದೆ. ಏತನ್ಮಧ್ಯೆ ಇತ್ತೀಚೆಗೆ ನಾಯಕ ರಜತ್ ಪಾಟಿದಾರ್ ಜೊತೆಗಿನ ಆರ್ಸಿಬಿ ಪಾಡ್ಕಾಸ್ಟ್ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಆ್ಯಂಕರ ರಜತ್ಗೆ ನಾಯಕತ್ವದ ಹೊಸ ಜರ್ನಿಯ ಕುರಿತು ಕೆಲ ಪ್ರಶ್ನೆಗಳನ್ನು ಕೇಳುತ್ತಾರೆ.
ಅದಕ್ಕೆ ಪಾಟಿದಾರ್ ಕೂಡ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈ ವೇಳೆ, ಆ್ಯಂಕರ ನೀವು ಸ್ಪಿನ್ ಬೌಲಿಂಗ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತೀರಿ ಇದಕ್ಕೆ ಯಾರು ಪ್ರೇರಣೆ ಎಂದು ಕೇಳಲಾಗುತ್ತಿದೆ. ಇದಕ್ಕೆ ಉತ್ತರಿಸಿದ ಪಾಟಿದಾರ್ ರಾಹುಲ್ ದ್ರಾವಿಡ್ ಅವರೇ ನನಗೆ ಪ್ರೇರಣೆ ಅವರು ಸ್ಪಿನ್ ಬೌಲಿಂಗ್ ಆಡುವ ವಿಧಾನವನ್ನೇ ನಾನು ಅನುಸರಿಸುತ್ತೇನೆ ಎಂದು ಉತ್ತರ ನೀಡಿದರು.
ಇದರ ಬೆನ್ನಲ್ಲೇ ಆ್ಯಂಕರ ಕಳೆದ 18 ವರ್ಷಗಳಿಂದ ಆರ್ಸಿಬಿ ಟ್ರೋಫಿ ಗೆದ್ದಿಲ್ಲ. ಈ ಬಾರಿ ಕಪ್ ಗೆದ್ದರೆ ಆರ್ಸಿಬಿಗೆ ಕಪ್ ತಂದುಕೊಟ್ಟ ಮೊದಲ ನಾಯಕ ಆಗಲಿದ್ದೀರಿ ಇದರ ಬಗ್ಗೆ ಏನು ಹೇಳುವಿರಿ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಯಕ ರಜತ್ ಪಾಟಿದಾರ್ ಆರ್ಸಿಬಿ ಈಗಾಗಲೇ ಒಂದು ಕಪ್ ಗೆದ್ದಿದೆ.
ಮಹಿಳಾ ತಂಡ ಟ್ರೋಫಿ ಗೆದ್ದುಕೊಂಡಿದೆ. ಅವರು ನಮಗೆ ಸ್ಪೂರ್ತಿಯಾಗಿದ್ದಾರೆ. ನಮ್ಮ ಬಳಿಯೂ ಒಂದು ಟ್ರೋಫಿ ಇದೆ. ಆರ್ಸಿಬಿ ಬಳಿ ಟ್ರೋಫಿ ಇಲ್ಲ ಎಂದು ಯಾರು ಹೇಳಕೂಡದು ಎಂದಿದ್ದಾರೆ. ರಜತ್ ಅವರ ಈ ಉತ್ತರಕ್ಕೆ ಫ್ಯಾನ್ಸ್ ಖುಷ್ ಆಗಿದ್ದಾರೆ.




