———————————————————-ಭಾರತದವರೇ ಆದ ಕೊನೆರೂ ಹಂಪಿ ವಿರುದ್ಧ ಗೆಲುವು
ನವದೆಹಲಿ: ಭಾರತದ 19 ರ ಹರೆಯದ ಯುವ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ ಅವರು ಫಿಡೆ ವಿಶ್ವ ಮಹಿಳಾ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಇತಿಹಾಸ ಬರೆದಿದ್ದಾರೆ.

ಕೋನೆರು ಹಂಪಿ ಹಾಗೂ ಬಲಗಡೆ ಪ್ರಶಸ್ತಿ ಗೆದ್ದ ದಿವ್ಯಾ ದೇಶಮುಖ
ಜಾರ್ಜಿಯಾದ ಬತುಮಿಯಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್ ನಲ್ಲಿ ಅವರು ಭಾರತದವರೇ ಆದ 38 ವರ್ಷದ ಹಿರಿಯ ಆಟಗಾರ್ತಿ ಕೊನೆರೂ ಹಂಪಿ ವಿರುದ್ಧ ರ್ಯಾಪಿಡ್ ಟೈ ಬ್ರೇಕರ್ ನಲ್ಲಿ ಗೆಲುವು ದಾಖಲಿಸುವ ಮೂಲಕ ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. ವಿಶ್ವದ 15 ನೇ ಶ್ರೇಯಾಂಕದ ಆಟಗಾರ್ತಿಯಾಗಿ ಪಂದ್ಯಾವಳಿಗೆ ಪ್ರವೇಶಿಸಿದ್ದ ಭಾರತದ ಕಿರಿಯ ಆಟಗಾರ್ತಿ ಪಂದ್ಯಾವಳಿಯುದ್ದಕ್ಕೂ ಉತ್ತಮ ಎದುರಾಳಿಗಳ ವಿರುದ್ಧ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದರು.
ಫೈನಲ್ ನಲ್ಲಿ ಭಾರತದವರೇ ಆದ ಕೊನೆರೂ ಹಂಪಿ ವಿರುದ್ಧ ಚಾಣಾಕ್ಷ ನಡೆಯೊಂದಿಗೆ ಪ್ರಬಲ ಎದುರಾಳಿಯನ್ನು ಸೋಲಿಸಿದರು. ಕ್ಲಾಸಿಕಲ್ ವಿಭಾಗದ ಎರಡೂ ಪಂದ್ಯಗಳು ಡ್ರಾ ಆಗಿದ್ದರಿಂದ ವಿಜೇತರನ್ನು ನಿರ್ಧರಿಸಲು ರ್ಯಾಪಿಡ್ ವಿಭಾಗಕ್ಕೆ ಮೋರೆ ಹೋಗಲಾಯಿತು. ರ್ಯಾಪಿಡ್ ವಿಭಾಗದಲ್ಲಿ ದಿವ್ಯಾ ಪ್ರಭುತ್ವ ಸಾಧಿಸಿದರು.




