Ad imageAd image

ಹೊತ್ತಿ ಉರಿದ KKRTC ಬಸ್: ಪ್ರಯಾಣಿಕರು ಪಾರು

Bharath Vaibhav
ಹೊತ್ತಿ ಉರಿದ KKRTC ಬಸ್: ಪ್ರಯಾಣಿಕರು ಪಾರು
WhatsApp Group Join Now
Telegram Group Join Now

ಔರಾದ್: ತಾಲ್ಲೂಕಿಗೆ ಸಮೀಪದ ಕಪ್ಪೆ ಕೇರಿ ಬಳಿ ಬುಧವಾರ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಧಗಧಗನೇ ಹೊತ್ತಿ ಉರಿದಿದೆ.

ಬೀದರ್ ಕಡೆಯಿಂದ ಬರುತ್ತಿದ್ದ ಔರಾದ್ ಘಟಕದ ಬಸ್ ಕಪ್ಪೆಕೇರಿ ಬಳಿ ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ಇದರಿಂದ ಭಯಭೀತರಾದ ಪ್ರಯಾಣಿಕರು ಬಸ್‌ನಿಂದ ಕಳಗಿಳಿಯುತ್ತಿದ್ದಂತೆ ಹೊಗೆ ಬೆಂಕಿಯಾಗಿ ಇಡೀ ಬಸ್ ಧಗ ಧಗನೇ ಹೊತ್ತಿ ಉರಿದಿದೆ. ತಕ್ಷಣ ಸ್ಥಳಕ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.

ಎಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಬಸ್ಸಿನಲ್ಲಿದ್ದ 25 ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ. ಹೀಗಾಗಿ ಯಾವುದೇ ಅನಾಹುತ ಆಗಿಲ್ಲ ಎಂದು  ಘಟಕ ವ್ಯವಸ್ಥಾಪಕ ರಾಜೇಂದ್ರ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!