ಭಾಲ್ಕಿ :-ತಾಲೂಕಿನ ಹಾಲಹಳ್ಳಿ ಕೆ ಗ್ರಾಮದ ಕೆ.ಎಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರಯುಕ್ತ ಕೆ.ಎಲ್ ಪಬ್ಲಿಕ್ ಶಾಲಾ ಆಡಳಿತ ಹರ್ಷ ವ್ಯಕ್ತಪಡಿಸಿದೆ.
14 ಮತ್ತು 17 ವರ್ಷದ ಒಳಗಿನ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಕೆ.ಎಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿ ಚೇಸ್ ನಲ್ಲಿ 6 ವಿದ್ಯಾರ್ಥಿಗಳು,ಕುಸ್ತಿಯಲ್ಲಿ 2 ವಿದ್ಯಾರ್ಥಿಗಳು ಹಾಗೂ ಫ್ಯಾನ್ಸಿ ಕ್ರೀಡೆಯಲ್ಲಿ ಒಂದು ವಿದ್ಯಾರ್ಥಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳ ಪೋಷಕರಿಗೆ ಹಾಗೂ ಕಾರಣಿ ಕರ್ತರಾದ ದೈಹಿಕ ಶಿಕ್ಷಕ ಶಿವಾನಂದ ಮೇತ್ರೆ ಅವರಿಗೆ ಶಾಲಾ ಆಡಳಿತದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಬಳಿಕ ಕೆ.ಎಲ್ ಪಬ್ಲಿಕ್ ಶಾಲೆಯ ಅಧ್ಯಕ್ಷ ರಾಜಕುಮಾರ ಕೆ.ಲಿಂಗಬಾಶೆಟ್ಟಿ, ದೈಹಿಕ ಶಿಕ್ಷಕ ಶಿವಾನಂದ ಮೇತ್ರೆ,ಶಿಕ್ಷಕಿ ಥೈಸಿನ್ ಸೇರಿ ಇತರರು ನಮ್ಮ ಮಾಧ್ಯಮ ಜೊತೆಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದು ,ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅರ್ಚನಾ ಆರ್.ಲಿಂಗಬಾಶೆಟ್ಟಿ,ಜಗದೇವಿ, ಸರ್ವೇಶ್,ಶ್ರೀದೇವಿ ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು,ಶಾಲೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ:-ಸಜೀಶ