ರಾಜಕೋಟ: ಕೆ.ಎಲ್. ರಾಹುಲ್ ಅವರ ರ‍್ಜರಿ ಶತಕದ ನೆರವಿನಿಂದ ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧ ಇಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಎದುರಾಳಿ ತಂಡಕ್ಕೆ ೨೮೫ ರನ್ ಗಳ ಗೆಲುವಿನ ಗುರಿ ನೀಡಿದೆ.
ಖಾಂದೇರಿ ನಿರಂಜನ್ ಷಾ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಇಂದು ಸಂಕಷ್ಟಕ್ಕೆ ಸಿಲುಕಿದ್ದಾಗ ಮೈದಾಣಕ್ಕೆ ಬಂದ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರರ‍್ಶನ ನೀಡಿದರು.
ಪಂದ್ಯದ ಒಂದು ಹಂತದಲ್ಲಿ ೧೧೮ ಕ್ಕೆ ೪ ವಿಕೆಟ್ ಕಳೆದುಕೊಂಡು ತೊಂದರೆಯಲ್ಲಿದ್ದ ಭಾರತ ತಂಡಕ್ಕೆ ಕೆ.ಎಲ್. ರಾಹುಲ್ ಆಸರೆಯಾದರು.
ರಾಹುಲ್ ೯೨ ಎಸೆತಗಳಲ್ಲಿ ೧೧ ಬೌಂಡರಿ, ೧ ಸಿಕ್ಸರ್ ನೆರವಿನಿಂದ ೧೧೨ ರನ್ ಗಳಿಸಿ ಔಟಾಗದೇ ಉಳಿದರು.
ಕೆ.ಎಲ್. ರಾಹುಲ್ ಶತಕ: ಕಿವೀಸ್‌ಗೆ ೨೮೫ ರನ್‌ಗಳ ಗುರಿ




