Ad imageAd image

ನವಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು:ಶಾಸಕ ಕೆ.ಎಂ ಶಿವಲಿಂಗೇಗೌಡ

Bharath Vaibhav
ನವಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು:ಶಾಸಕ ಕೆ.ಎಂ ಶಿವಲಿಂಗೇಗೌಡ
WhatsApp Group Join Now
Telegram Group Join Now

ಅರಸೀಕೆರೆ :ನಾಡು ನುಡಿ ಹಿರಿಮೆ ಗರಿಮೆ ಸಾರುವ ಉತ್ಸವಗಳು ನವಂಬರ್ ತಿಂಗಳಿಗೆ ಮಾತ್ರ ಕನ್ನಡ ರಾಜ್ಯೋತ್ಸವ ಆಚರಣೆಗೆ ಸೀಮಿತವಾಗದೆ ನಿತ್ಯೋತ್ಸವ ವಾಗಬೇಕು ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರು ಆದ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿದರು.

ನಗರದ ಶಾನುಭೋಗರ ಬೀದಿಯ ಜೈ ಕರ್ನಾಟಕ ಆಟೋ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕುವೆಂಪು ನುಡಿ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವವು ನಿತ್ಯೋತ್ಸವ ವಾಗಿರಿ ನಾಡು ನುಡಿ ಕಲೆ ಸಾಹಿತ್ಯ ಸಂಗೀತಗಳು ನಿತ್ಯ ಮೇಳಯಿಸಲಿ ಎಂದು ಆಶಿಸಿದರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಖ್ಯಾತ ವಕೀಲ ವಿವೇಕ್ ಮಾತನಾಡಿ ಸಾವಿರಾರು ವರ್ಷಗಳ ಸುದೀರ್ಘ ಇತಿಹಾಸವಿರುವ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ರಾಷ್ಟ್ರಕವಿ ಕುವೆಂಪು ಸೇರಿದಂತೆ ಕನ್ನಡಾಂಬೆಯ ಪುತ್ರರಾದ ಕವಿ ಪುಂಗವರು ಸಾಹಿತಿಗಳು ಮುಗಿಲೆತ್ತರಕ್ಕೆ ಬೆಳೆದಿದ್ದಾರೆ ಇಂತಹ ಸುಸಂೃತಾ ಭಾಷೆಯನ್ನು ನಾವು ನೀವೆಲ್ಲ ಮತ್ತಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಾಗದಿದ್ದರೂ ಪರವಾಗಿಲ್ಲ ನಿತ್ಯ ಕನ್ನಡ ಭಾಷೆಯನ್ನು ಬಳಸೋಣ ಆ ಮೂಲಕ ಕನ್ನಡಾಂಬೆಯ ಋಣ ತೀರಿಸೋಣ ಎಂದು ಕರೆ ನೀಡಿದರು.

ಮತ್ತೋರ್ವ ಸನ್ಮಾನಿತರಾದ ಖ್ಯಾತ ವೈದ್ಯ ಡಾ, ಶಿವಕುಮಾರ್ ಮಾತನಾಡಿ ನಮ್ಮ ತಾತ ಮುತ್ತನ್ತಂದಿರು ಬಳಸುತ್ತಿದ್ದ ಕನ್ನಡ ಭಾಷೆಯ ಬಹುತೇಕ ಪದಗಳನ್ನು ನಾವು ಬಳಸುತ್ತಿಲ್ಲ ಇನ್ನು ನಮ್ಮ ಮುಂದಿನ ಪೀಳಿಗೆಯಂತೂ ಶೇ 50 ರಷ್ಟು ಕನ್ನಡ ಭಾಷೆಯನ್ನು ಬಳಸುತ್ತಾರೆ ಎಂಬುದೇ ಅನುಮಾನವಾಗಿದೆ ಈ ರೀತಿಯ ಮನೋಭಾವವನ್ನ ಯುವ ಪೀಳಿಗೆಯಲ್ಲಿ ತೆಗೆಯಲು ಈ ರೀತಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ಹಾಗೂ ಉತ್ಸವಗಳು ಹೆಚ್ಚು ಹೆಚ್ಚು ನಡೆಯಬೇಕಿದೆ ಎಂದು ಕಿವಿಮಾತು ಹೇಳಿದರು.

ಅನಂತ ಶಿಕ್ಷಣ ಸಮೂಹ ಸಮಸ್ತೆಗಳ ಚೇರ್ಮನ್ ಆರ್ ಅನಂತಕುಮಾರ್ ಮಾತನಾಡಿ ಎಲ್ಲಾ ಭಾಷೆಯನ್ನು ಕಲಿಯೋಣ ಆದರೆ ಕನ್ನಡ ಭಾಷೆಯನ್ನು ಬಳಸೋಣ ಅಷ್ಟು ಮಾಡಿದರೆ ಸಾಕು ನಾವು ಕನ್ನಡ ಭಾಷೆಯನ್ನು ಬೆಳೆಸುವುದು ಬೇಡ ಅದು ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ ನಮ್ಮತನ ಎಂಬುದು ಕನ್ನಡ ಭಾಷೆಯಲ್ಲಿ ಅಡಗಿದೆ ಎಂಬುದನ್ನು ನಾವು ಮರೆಯದಿರೋಣ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಚಲನಚಿತ್ರದ ಹಾಸ್ಯ ಕಲಾವಿದರಾದ ಮೂಗು ಸುರೇಶ್,ಬೌ ಬೌ ಬಿರಿಯಾನಿ ಖ್ಯಾತಿಯ ಜಯರಾಂ.ಮತ್ತು ಅವರ ತಂಡ ನಡೆಸಿಕೊಟ್ಟ ರಸಮಂಜರಿ ಕಾರ್ಯಕ್ರಮ ಸಾರ್ವಜನಿಕರ ಗಮನ ಸೆಳೆಯಿತು.

ರಾಜ್ಯ ಕಾಂಗ್ರೆಸ್ ಸೇವಾದಳದ ಕಾರ್ಯದರ್ಶಿ ವೆಂಕಟೇಶ್,ಜಿಲ್ಲಾ ಕಾಂಗ್ರೆಸ್ ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ವೆಂಕಟೇಶ್,ನಗರಸಭೆ ಸದಸ್ಯರಾದ ಶುಭ ಮನೋಜ್,ದರ್ಶನ್, ಸೇರಿದಂತೆ ಜೈ ಕರ್ನಾಟಕ ಆಟೋ ಚಾಲಕರು ಮತ್ತು ಮಾಲೀಕರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ರಾಜು ಅರಸಿಕೆರೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!