ಚಿಂಚೋಳಿ:ಕಲ್ಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ರೈತರ ಕಲ್ಯಾಣಕ್ಕಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸುತ್ತಮುತ್ತಲಿನ ಹಳ್ಳಿಗಳ ನೂರಾರು ರೈತರು ಮತ್ತು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ರೇವಣಸಿದ್ದೇಶ್ವರ ರ ಕೃಪೆಗೆ ಪಾತ್ರರಾದರು.ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿವಿಧಾನಗಳು ನಾಡಿನ ರೈತರಿಗೆ ಉತ್ತಮ ಮಳೆ-ಬೆಳೆ ಸಿಗಲಿ ಮತ್ತು ಬೆಳೆದ ಬೆಳೆಗೆ ಯೋಗ್ಯ ಬೆಲೆ ಲಭಿಸಲಿ ಎಂದು ಸಂಕಲ್ಪಿಸಿ ಮಹಾಪೂಜೆ ಹಾಗೂ ರುದ್ರಾಭಿಷೇಕ ರೈತ ಮುಖಂಡರಾದ ಶ್ರೀ ಶಿವರಾಜ ಪಾಟೀಲ್ ಗೋಣಗಿ,ವೀರಣ್ಣ ಗಂಗಾಣಿ,ನೇತೃತ್ವದಲ್ಲಿ ನೆರವೇರಿಸಲಾಯಿತು.

ಯುಗಾದಿ ಹಬ್ಬವು ರೈತರಿಗೆ ಕೇವಲ ಹಬ್ಬವಲ್ಲ, ಅದು ಹೊಸ ಕೃಷಿ ವರ್ಷದ ಸಂಕಲ್ಪದ ದಿನ. ಭೂಮಿಯನ್ನು ನಂಬಿದ ಜನರಿಗೆ ಈ ದಿನವು ಸಮೃದ್ಧಿಯ ಮುನ್ಸೂಚನೆಯಾಗಿರುತ್ತದೆ. ರೈತರ ಬದುಕಿನಲ್ಲಿ ಕಹಿ ಮರೆಯಾಗಿ ಸಮೃದ್ಧಿಯ ಸಿಹಿ ದೊರೆಯುವಂತಾಗಲಿ ಎಂದು ಆರಾಧ್ಯ ದೈವ ಶ್ರೀ ರೇವಣಸಿದೇಶ್ವರ ರಲ್ಲಿ ಪ್ರಾರ್ಥಿಸಿಕೊಳ್ಳಲಾಯಿತು.
ವರದಿ: ಸುನಿಲ್ ಸಲಗರ




