Ad imageAd image

ದಲಿತರು, ಅಲ್ಪಸಂಖ್ಯಾತರು ಯಾಕೆ ಮುಖ್ಯಮಂತ್ರಿ ಆಗಬಾರದು? : ಕೆ. ಎನ್ ರಾಜಣ್ಣ

Bharath Vaibhav
ದಲಿತರು, ಅಲ್ಪಸಂಖ್ಯಾತರು ಯಾಕೆ ಮುಖ್ಯಮಂತ್ರಿ ಆಗಬಾರದು? : ಕೆ. ಎನ್ ರಾಜಣ್ಣ
WhatsApp Group Join Now
Telegram Group Join Now

ಬೆಂಗಳೂರು : ಬಿಜೆಪಿ ಬಂದರೆ ಲಿಂಗಾಯತರು ಮುಖ್ಯಮಂತ್ರಿ ಅಂದರೆ? ಜೆಡಿಎಸ್ ಬಂದ್ರೆ ಒಕ್ಕಲಿಗರು ಮುಖ್ಯಮಂತ್ರಿ ಅಂದರೆ? ಬೇರೆ ಸಮುದಾಯಕ್ಕೆ ನ್ಯಾಯ ಎಲ್ಲಿ ಕೊಟ್ಟಂಗೆ ಆಗುತ್ತದೆ? ದಲಿತರು ಯಾಕೆ ಮುಖ್ಯಮಂತ್ರಿ ಆಗಬಾರದು? ಅಲ್ಪಸಂಖ್ಯಾತರು ಯಾಕೆ ಮುಖ್ಯಮಂತ್ರಿ ಆಗಬಾರದು ಎಂದು ದಲಿತ ಸಿಎಂ ಕುರಿತು ಮತ್ತೆ ಮಾಜಿ ಸಚಿವ ಕೆ ಎನ್ ರಾಜಣ್ಣ ಪುನರುಚ್ಚಿಸಿದ್ದಾರೆ.

ಈ ವಿಚಾರವಾಗಿ ವಾಸ್ತವಂಶ ಹೇಳಿದರೆ ಬಹಳ ಜನಕ್ಕೆ ಹಿಡಿಸುವುದಿಲ್ಲ. ದಲಿತರು ಅಲ್ಪಸಂಖ್ಯಾತರು ಯಾಕೆ ಸಿಎಂ ಆಗಬಾರದು? ಕಾಂಗ್ರೆಸ್ ಪಕ್ಷ ಎಲ್ಲ ಸಮುದಾಯದವರಿಗು ನ್ಯಾಯ ಕೊಡುವಂತಹ ಪಕ್ಷ. ನಾನು ಬೇರೆ ಬೇರೆ ವಿಚಾರಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೈಯುತ್ತೇನೆ ಅದು ಬೇರೆ ವಿಚಾರ. ದೇವರಾಜ್ ಅರಸು ಅವರು 1982 ರಲ್ಲಿ ಎಂಎಲ್‌ಎ ಇರಲಿಲ್ಲ ಅವರನ್ನ ಮುಖ್ಯಮಂತ್ರಿ ಮಾಡುತ್ತಾರೆ.

ದೇವರಾಜು ಅರಸು ಅವರಿಗೆ ಇನ್ನೊಬ್ಬ ಅರಸು ಜಾತಿಯ ಎಂಎಲ್‌ಎ ಇಲ್ಲ. ಅದೇ ರೀತಿ ವಿರಪ್ಪ ಮೊಯ್ಲಿಯವರಿಗೆ ಕೂಡ ಇನ್ನೊಬ್ಬ ಸಮುದಾಯದವನು ಇಲ್ಲ. ಅದೇ ರೀತಿ ಧರ್ಮಸಿಂಗ್ ಅವರಿಗೂ ಇನ್ನೊಬ್ಬ ಜಾತಿಯವರಿರಲಿಲ್ಲ. ಹಾಗಾಗಿ ಕಾಂಗ್ರೆಸ್ ಪಾರ್ಟಿ ಎಲ್ಲರಿಗೂ ಅವಕಾಶ ಕೊಟ್ಟಿದೆ. ಅದೇ ರೀತಿ ದಲಿತರಿಗೂ ಹಾಗೂ ಅಲ್ಪಸಂಖ್ಯಾತರಿಗೂ ಸಿಎಂ ಆಗುವ ಅವಕಾಶ ನೀಡಬೇಕು ಎಂದು ಅವರು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!