Ad imageAd image

ನಮ್ಮ ಹಕ್ಕುಗಳ ಬಗ್ಗೆ ಪ್ರತಿಯೋಬ್ಬರು ತಿಳಿದು ಕೊಳ್ಳಿ : ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಸಲಹೆ

Bharath Vaibhav
ನಮ್ಮ ಹಕ್ಕುಗಳ ಬಗ್ಗೆ ಪ್ರತಿಯೋಬ್ಬರು ತಿಳಿದು ಕೊಳ್ಳಿ : ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಸಲಹೆ
WhatsApp Group Join Now
Telegram Group Join Now

ಬೆಂಗಳೂರು : ಈಗಿನ ಕಾಲದಲ್ಲಿ ಮೊಸ ವಂಚನೆ ದೌರ್ಜನ್ಯ ದರೋಡೆಗಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಕಿರುಕುಳ ನಡೆಯುತ್ತಿದೆ ಎಂದು ಕ್ಷೇತ್ರದ ಕಾಂಗ್ರೆಸ್ ಪ್ರಭಾವಿ ನಾಯಕ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಅಸಮಾಧಾನ ವ್ಯಕ್ತಪಡಿಸಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನವ ಕರ್ನಾಟಕ ಮಾನವ ಹಕ್ಕುಗಳ, ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿಯ 3ನೇ ವಾರ್ಷಿಕೋತ್ಸವ ಹಾಗೂ ರಾಜರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಮಿತಿಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪರಮೇಶ್ವರ್ ಆರ್, ರಾಷ್ಟೀಯ ಅಧ್ಯಕ್ಷ ಡಾ. ಸೂರ್ಯಕಾಂತ್ ಪಾಟೀಲ್ ಹಾ ಪದಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಪಾಲ್ಗೊಂಡು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕೆ. ನಾಗಭೂಷಣ್ ಮಾತನಾಡಿದರು.

ನವ ಕರ್ನಾಟಕ ಮಾನವ ಹಕ್ಕುಗಳ, ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಪರಮೇಶ್ವರ್ ಆರ್ ಅವರು ಸರ್ವರಿಗೂ ಸ್ವಾಗತಿಸಿದರು.

ರಾಷ್ಟೀಯ ಅಧ್ಯಕ್ಷ ಡಾ ಸೂರ್ಯಕಾಂತ್ ಪಾಟೀಲ್ ಸಂಘದ ಸಾಧನೆಗಳ ಮತ್ತು ಆಗು ಹೋಗುಗಳ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಹನುಮಂತಪ್ಪ ಮೇಡೆಗಾರ್, ಪ್ರದಾನ ಕಾರ್ಯದರ್ಶಿ ಅಂಬಣ್ಣ ಮುಡಬಿ ಸಂಘದ ಪ್ರಭಾವಿ ಮುಖಂಡ ಶಂಕರ್ ಗೌಡ ಪಾಟೀಲ್,ನವ ಕರ್ನಾಟಕ ಮಾನವ ಹಕ್ಕುಗಳ, ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿಯ ಮುಖಂಡರು ಮಹಿಳೆಯರು ಕಾರ್ಯಕರ್ತರು ಪದಾಧಿಕಾರಿಗಳು ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.

ವರದಿ :ಅಯ್ಯಣ್ಣ ಮಾಸ್ಟರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!