Ad imageAd image

‘ಮೃತ್ಯು ಆಗಮಿಸುವ ಮುನ್ನ ಬದುಕು ತಿಳಿದುಕೋ’

Bharath Vaibhav
‘ಮೃತ್ಯು ಆಗಮಿಸುವ ಮುನ್ನ ಬದುಕು ತಿಳಿದುಕೋ’
WhatsApp Group Join Now
Telegram Group Join Now

ಶಿರದವಾಡ ಪಂಚಕಲ್ಯಾಣ ಪೂಜಾ ಮಹೋತ್ಸವದಲ್ಲಿ ಪರಮಪೂಜ್ಯ ವಿದ್ಯಾಸಾಗರ ಮುನಿಗಳಿಂದ ಮನುಕುಲಕ್ಕೆ ಕಿವಿಮಾತು

ರಾಜ್ಯಾಭಿಷೇಕ ಶಾಸ್ತ್ರ ಮೆರವಣಿಗೆ ಕಾರ್ಯಕ್ರಮ

ನಿಪ್ಪಾಣಿ: ಮಾನವನ ಬದುಕು ಅತ್ಯಂತ ಮೌಲ್ಯಯುತ ಎಲ್ಲ ಜೀವ ರಾಶಿಗಳಲ್ಲಿ ಅರಿವು ಎಂಬ ವಿಶೇಷ ಜ್ಞಾನವನ್ನು ಜಿನೇಶ್ವರ ಮಾನವನಿಗೆ ದಯಪಾಲಿಸಿದ್ದಾನೆ. ಆದ್ದರಿಂದ ಮೃತ್ಯು ಆಗಮಿಸುವ ಮುನ್ನ ಬದುಕಿನ ತಿರುಳು ಅರಿತುಕೊಳ್ಳಿ. ಶಾಂತಿ,ತ್ಯಾಗ, ಅಹಿಂಸೆ, ಸದ್ವಿಚಾರ, ಆಚಾರ, ಶರಣಾಗತಿ, ಸತ್ಚಾರಿತ್ರ್ಯ ಶರಣಾಗತಿ,ಪರೋಪಕಾರ, ಅಳವಡಿಸಿಕೊಂಡು ನೈಜ ಬದುಕಿನ ಅರ್ಥ ತಿಳಿದುಕೊಳ್ಳಿ ಎಂದು ಪರಮಪೂಜ್ಯ ವಿದ್ಯಾಸಾಗರಜೀ ಮುನಿಗಳು ಸಮಸ್ತ ಶ್ರವಕ ಶ್ರಾವಕಿಯರಿಗೆ ಕಿವಿಮಾತು ಹೇಳಿದರು.

 

ನಿಪ್ಪಾಣಿ ತಾಲೂಕಿನ ಶಿರದವಾಡ ಗ್ರಾಮದಲ್ಲಿ ಜರಗುತ್ತಿರುವ ಪಂಚಕಲ್ಯಾಣ ಪೂಜಾ ಮಹೋತ್ಸವದ ನಾಲ್ಕನೇ ದಿನವಾದ ರಾಜ್ಯಾಭಿಷೇಕ ದಿನದಂದು ತಮ್ಮ ಪ್ರವಚನದಲ್ಲಿ ತಿಳಿಸಿದರು.

ಬೆಳಿಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಆಗಮಿಸಿ ತ್ಯಾಗಿ ಮುನಿಗಳಿಂದ ಆಶೀರ್ವಾದ ಪಡೆದರು. ಮಧ್ಯಾನ್ಹ ಯುವ ನಾಯಕ ಉತ್ತಮ ಪಾಟೀಲ ವೀರಸೇವಾ ದಳ ಅಧ್ಯಕ್ಷ ಬಾಳಾ ಸಾಹೇಬ್ ಪಾಟೀಲ ತಮ್ಮ ಸಮರ್ಥಕರೊಂದಿಗೆ ಆಗಮಿಸಿ ಶ್ರೀಗಳ ಆಶೀರ್ವಚನ ಪಡೆದು ಅವರ ಪ್ರವಚನ ಆಲಿಸಿದರು. ಈ ಸಂದರ್ಭದಲ್ಲಿ ಉತ್ತಮ ಪಾಟೀಲ,ಹಾಗೂ ಬಂಟಿ ಪಾಟೀಲ್ ಮಾತನಾಡಿದರು.

ರಾಜಾಭಿಷೇಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ನಿತ್ಯವಿಧಿ,ಪಂಚಾಮೃತ ಅಭಿಷೇಕ, ಶಾಂತಿಧಾರಾ,ಸೇರಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ 56 ದೇಶಗಳ ರಾಜ್ಯದ ರಾಜ ರಿಂದ ಭಕ್ತಿ ಸಮರ್ಪಣೆ, ಸೌಧರ್ಮ ಇಂದ್ರ, ಇಂದ್ರಾಯನಿಯರಿಂದ ವಿವಿಧ ಪದಸಿದ್ಧ ಧರ್ಮನುರಾಗಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ರಾಜ್ಯಾಭಿಷೇಕ ದಿನವಾದ ಗುರುವಾರ ಬೆಳಗಾವಿ ಕೊಲ್ಲಾಪುರ್ ಜಿಲ್ಲೆಗಳಿಂದ 30 ಸಾವಿರಕ್ಕೂ ಅಧಿಕ ಶ್ರಾವಕ, ಶ್ರಾವಕೀಯರು ಉಪಸ್ಥಿತರಿದ್ದರು.

ಮಹಾವೀರ ಚಿಂಚಣೆ 

WhatsApp Group Join Now
Telegram Group Join Now
Share This Article
error: Content is protected !!