ಕಾಳಗಿ : ತಾಲೂಕಿನ ಹೊಸಳ್ಳಿ ಎಚ್ ಕ್ರಾಸ್ ಹತ್ತಿರ ವಿರುವ ಶ್ರೀಮತಿ ಶ್ರೀದೇವಿ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ) ಮರಪಳ್ಳಿ ಸಂಚಾಲಿತ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 14ನೇ ವರ್ಷದ ಶಾಲಾ ವಾರ್ಷಿಕೋತ್ಸವ ಮತ್ತು ಮಾತೃ ವಂದನಾ ಕಾರ್ಯಕ್ರಮ ಜರುಗಿತು, ಮೊದಲಿಗೆ ವಿದ್ಯಾ ದೇವತೆ ಸರಸ್ವತಿ ದೇವಿ ಮತ್ತು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ಮಕ್ಕಳಿಂದ ತಂದೆ ತಾಯಿ ಗೆ ಪಾದ ಪೂಜೆ ಮತ್ತು ಕೈ ತುತ್ತಿನ ಊಟ ಮಾಡುವ ಮೂಲಕ ಮುಖ್ಯ ಅತಿಥಿ ಮಹಿಪಾಲರೆಡ್ಡಿ ವಿದ್ಯಾ ಭಾರತಿ ಕರ್ನಾಟಕ ಕಲಬುರಗಿ ಜಿಲ್ಲಾ ಘಟಕ ಅಧ್ಯಕ್ಷರು ಸೇಡಂ ಅವರು ಎಲ್ಲಾ ಮಕ್ಕಳು ಗುರುಗಳಿಗೆ ಮತ್ತು ತಂದೆ ತಾಯಿ ಹತ್ತಿರ ಗೌರವದಿಂದ ಕಾಣುವುದರ ಜೊತೆಗೆ ಅವರ ಮಾತುಗಳು ಚಾಚು ತಪದೇ ಪಾಲಿಸಬೇಕು ಎಂದು ಮಕ್ಕಳಿಗೆ ತಿಳಿಸಿದರು, ಸಾಯಂಕಾಲ 5:40 ಕ್ಕೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು, ಮಕ್ಕಳು ವಿವಿಧ ಪಾತ್ರದಲ್ಲಿ ಕಿರು ನಾಟಕ ಮತ್ತು ನೃತ್ಯ, ಅನೇಕ ಹಾಡುಗಳಿಗೆ ಹೆಜ್ಜೆ ಹಾಕಿದರು, ಈ ಸಂಧರ್ಭದಲ್ಲಿ : ಶಾಲೆಯ ಸಂಸ್ಥಾಪಕರು, ಮುಖ್ಯ ಗುರುಗಳು, ಸಹ ಶಿಕ್ಷಕರು, ಮಕ್ಕಳು, ಪೋಷಕರು, ಸರ್ವ ಸೇವಾ ಬಳಗದವರು ಇದ್ದರು.
ವರದಿ : ಹಣಮಂತ ಕುಡಹಳ್ಳಿ