ಮೈಸೂರು : ಸಿಎಂ ಸ್ಥಾನ ಬದಲಾವಣೆ ಬಗ್ಗೆ ಚರ್ಚೆ ಶುರುವಾಗಿರುವಂತೆಯೇ ಕೋಡಿ ಮಠದ ಶ್ರೀಗಳು ಈ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮೈಸೂರಿನಲ್ಲಿ ಕುರಿತು ಮಾತನಾಡಿದ ಅವರು, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಅವರು ನುಡಿದಿದ್ದಾರೆ.
ಮೈಸೂರಿನ ನಮನ್ ಫೌಂಡೇಷನ್ ಅವರು ನಿರ್ಮಿಸಿರುವ ಧ್ಯಾನ ಕೇಂದ್ರವನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೂ ಸಹ ತೊಂದರೆ ತಪ್ಪಿದ್ದಲ್ಲ ಎಂದು ಶ್ರೀಗಳು, ಅಧಿಕಾರದಲ್ಲಿರುವವರಿಗೆ ಹಲವು ಅಡಚಣೆ, ಅಡ್ಡಿ ಆತಂಕಗಳು ಎದುರಾಗಲಿವೆ. ಈಗಿನಿಂದಲೇ ಪರಿಹಾರೋಪಾಯಗಳನ್ನು ಕುರಿತು ಚಿಂತಿಸುವುದು ಉತ್ತಮ ಎಂದು ನುಡಿದರು.
ಒಂದು ದಿನ ಭಾರತಕ್ಕೆ ಬಹುದೊಡ್ಡ ಆಘಾತ ಕಾದಿದ್ದು, ಇಡೀ ವಿಶ್ವವೇ ನಮ್ಮೆಡೆಗೆ ತಿರುಗಿ ನೋಡಲಿದೆ. ಎಂದು ನುಡಿದಿದ್ದಾರೆ.




