ಬೆಂಗಳೂರು: ವಿರಾಟ್ ಕೋಹ್ಲಿ ಭಾರತ ಕ್ರಿಕೆಟ್ ತಂಡದ ಅಪ್ರತಿಮ ಆಟಗಾರ. ಏಕದಿನ ಕ್ರಿಕೆಟ್ ನಲ್ಲಿ 51 ಶತಕ ಸೇರಿದಂತೆ ಒಟ್ಟು 84 ಶತಕಗಳನ್ನು ಗಳಿಸಿರುವ 36 ಹರೆಯದ ಆಟಗಾರ ಕ್ರಿಕೆಟ್ ನಲ್ಲಿ ಎಲ್ಲವನ್ನು ಸಾಧನೆ ಮಾಡಿದ್ದಾರೆ. ಆದರೆ ಐಪಿಎಲ್ ನಲ್ಲಿ ಪ್ರಶಸ್ತಿ ಗೆದ್ದಿಲ್ಲ ಎನ್ನುವುದೊಂದೆ ಅವರ ಕೊರತೆ.
ಐಪಿಎಲ್ ಮತ್ತೊಂದು ಆವೃತ್ತಿ ಮಾರ್ಚ 22 ರಿಂದ ಆರಂಭವಾಗಲಿದ್ದು, ಕೊಹ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ ಬೆಂಗಳೂರು ತಂಡವನ್ನು ಪ್ರತಿನಿಧಿಸುವರು. ಈ ವರೆಗಿನ ಐಪಿಎಲ್ ಪಂದ್ಯಾವಳಿಯಲ್ಲಿ ವೈಯಕ್ತಿಕವಾಗಿ ಉತ್ತಮ ಸಾಧನೆಯನ್ನೇ ತೋರಿರುವ ಕೊಹ್ಲಿಗೆ ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ ಎನ್ನುವುದೊಂದೆ ಕೊರತೆ. ಈ ಬಾರಿಯಾದರೂ ಕೊಹ್ಲಿ ಅವರ ಆಸೆ ಈಡೇರುವುದೇ ಎಂಬುದನ್ನು ಕಾಯ್ದು ನೋಡಬೇಕು.