ಯಳಂದೂರು:ಪಟ್ಟಣದ ಬಳೇಪೇಟೆಯ ಅಂಬೇಡ್ಕರ್ ಬಡಾವಣೆಯಲ್ಲಿ ಪ್ರಥಮ ಬಾರಿಗೆ ಶ್ರೀ ಮಾರಮ್ಮ ತಾಯಿ ಶ್ರೀ ನಾಡಮೇಗಳಮ್ಮ ತಾಯಿ ಕೊಂಡೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆಡೆಯಿತು.
ಕೊಂಡೋತ್ಸವದ ಅಂಗವಾಗಿ ಮುಂಜಾನೆಯಿಂದಲ್ಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು ಉತ್ಸವ ಮೂರ್ತಿಯನ್ನು ಜಪದಕಟ್ಟೆಯಿಂದ ಹೂ ಹೊಂಬಾಲಳೆಯಿಂದ ಸತ್ತಿಗೆ ಸುರಿಪಾನಿ ಛತ್ರಿ ಚಾಮರಗಳಿಗೆ ಸಿಂಗರಿಸಿ ಮಂಗಳವಾದ್ಯಗಳೊಂದಿಗೆ ದೇವರ ಕಾರ್ಯಗಳ ಮೂಲಕ ಪ್ರಮುಖ ಬೀದಿಗಲ್ಲಿ ಮೆರೆವಣಿಗೆ ಮೂಲಕ ಬರಲಾಯಿತು.
ಕೊಂಡೋತ್ಸವದ ಸ್ಥಳಕ್ಕೆ ಬಂಧು ಕೊಂಡ ಹಾಯ್ತಿದ್ದಂತೆ ಭಕ್ತರಹರ್ಷೋದ್ಗರ ಮುಗಿಲುಮುಟ್ಟಿತು ನಂತರ ಭಕ್ತರು ಯುವಕರು ಯಜಮಾನರುಗಳು ಮಾರಿಕುಣಿತ ಕುಣಿದು ಆನಂದಿಸಿದರು.
ಕೊಂಡೋತ್ಸವಕೆ ಆಗಮಿಸಿದ ಎಲ್ಲಾ ಭಕ್ತದಿಗಳಿಗೆ ಬಳೇಪೇಟೆ ಯಜಮಾನರು ಕುಲಸ್ಥರು ವಂದನೆಗಳನ್ನು ತಿಳಿಸಿದರು.
ವರದಿ: ಸ್ವಾಮಿ ಬಳೇಪೇಟೆ