Ad imageAd image

ಕೊಪ್ಪಳ ಯುವಕನ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನೆ

Bharath Vaibhav
ಕೊಪ್ಪಳ ಯುವಕನ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನೆ
WhatsApp Group Join Now
Telegram Group Join Now

ಸಿಂಧನೂರು : ಆಗಸ್ಟ್ 8 ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವಾರ ನಡೆದ ಯುವಕನ ಬರ್ಬರ ಹತ್ಯೆ ಖಂಡಿಸಿ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಸಿಂಧನೂರು ಶಾಖೆ ವತಿಯಿಂದ ತಹಸಿಲ್ದಾರ್ ಮುಂದೆ ಪ್ರತಿಭಟಿಸಿ ಮಾನ್ಯ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಬಸವರಾಜ ಬಾದರ್ಲಿ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲ ತಿಂಗಳ ಹೆಚ್ಚಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ ಕೆಲ ತಿಂಗಳ ಹಿಂದೆ ಲಿಂಗಸೂಗೂರಿನ ಯುವಕ ಸಿಂಧೂರಿನಲ್ಲಿ ಇದೇ ರೀತಿ ಕೃತ್ಯ ಎಸಿಗಿದ್ದ ಈಗ ಕೊಪ್ಪಳದಲ್ಲಿ ಇಂಥ ಘಟನೆ ನಡೆದಿದೆ, ಇದರ ಬಗ್ಗೆ ಪಾಲಕರು ಸಹ ಆಲೋಚನೆ ಮಾಡಬೇಕಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಮಾತ್ ಇಸ್ಲಾಮಿ ಸಿಂಧನೂರು ಘಟಕ ಅಧ್ಯಕ್ಷರಾದ ಮೊಹಮ್ಮದ್ ಹುಸೇನ್ ರವರು ಇದು ತ್ರಿಕೋನ ಪ್ರೀತಿಯ ಘಟನೆಯಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಪ್ರಗತಿಪರ ಸಂಘಟನೆ ಮುಖಂಡರು ವಾತಾವರಣವನ್ನು ತಿಳಿಗೊಳಿಸಲು ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸಿದರು, ಮತಯುಗನ ಕುಟುಂಬಕ್ಕೆ ಆದ ದುಃಖವನ್ನು ಯಾರಿಂದಲೂ ಬರಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು ಪ್ರತಿಭಟನೆಯಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ನೀಡಲಾಯಿತು. ಮನವಿಯಲ್ಲಿ ಹತ್ಯೆಗೆ ಸಂಬಂಧಿಸಿದ ಆರೋಪಿಗಳಿಗೆ ತ್ವರಿತವಾಗಿ ಕಾನೂನು ಕ್ರಮ ಕೈಗೊಳ್ಳಬೇಕು, ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡರಾದ ಜನ ಬಾಬರ್ ಬಾಷಾ ಸಾಹೇಬ್, ಜಿಲಾನಿ ಪಾಷಾ, ಜಾಫರ್ ಅಲ್ಲಿ ಜಾಗೀರ್ದಾರ್, ನದೀಮುಲ್ಲಾ , ಜಾವದ್ ಖಾಜಿ, ಮೆಹಬೂಬ್ ಖಾನ್, ಡಾಕ್ಟರ್ ವಸಿಂ, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ತಾಲೂಕು ಅಧ್ಯಕ್ಷ ಅಬುಲೈಸ್ ನಾಯಕ್, ಇಸ್ಮೈಲ್ ಗಡಗಿ, ಎಸ್ಐಒ ಇಮ್ತಿಯಾಜ್, ನೂರ್ ಮೊಹಮ್ಮದ್, ನೈಮ್ ಇರ್ಫಾನ್, ಮಹಾವೀರ್ ಜೈನ್, ಬಸವರಾಜ್ ಬಾದರ್ಲಿ, ಚಿಟ್ಟಿಬಾಬು ಇನ್ನು ಅನೇಕರಿದ್ದರು.

ವರದಿ : ಬಸವರಾಜ ಬುಕ್ಕನಹಟ್ಟಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!