ಮುದಗಲ್ಲ :- ಐತಿಹಾಸಿಕ ಮಹತ್ವ ಸಾರುವ ಐತಿಹಾಸಿಕ ಮುದಗಲ್ಲ ಕೋಟೆ ಸದ್ಯ ಸರಕಾರದ ನಿರ್ಲಕ್ಷ್ಯದಿಂದ ಸೊರಗುತ್ತಿದೆ
ಮುದಗಲ್ ಕೋಟೆಯು ಹಲವಾರು ಶತಮಾನಗಳ ಇತಿಹಾಸವನ್ನು ಹೊಂದಿದೆ. ಇದರ ಆರಂಭೀಕ ದಾಖಲೆಗಳು 14 ನೇ ಶತಮಾನದಲ್ಲಿ ಬಹಮನಿ ಸುಲ್ತಾನರಿಂದ ನಿರ್ಮಿಸಲ್ಪಟ್ಟವು. ಮುದಗಲ್ ಕೋಟೆಯ ಅತ್ಯಂತ ಗಮನಾರ್ಹ ವೈಶಿಷ್ಟ್ಯವೆಂದರೆ ಅದರ ವಿಶಿಷ್ಟವಾದ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾಗಿದೆ.
ಆದರೆ ಕೋಟೆ ಆವರಣ ಈಗ ಮಾದಕ ವ್ಯಸನಿಗಳ ಅಡ್ಡೆಯಾಗುವ ಆತಂಕ ಕಾಣಿಸಿಕೊಂಡಿದೆ.ಕೊಟೆಯ ರಕ್ಷಣೆ ಹಿನ್ನೆಲೆಯಲ್ಲಿ ಪ್ರಾಚ್ಯವಸ್ತು ಇಲಾಖೆ ಕೂಡಲೇ ಸೂಕ್ತ ರಕ್ಷಣಾ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.ಖಾಲಿ ಹೊಡೆಯುತ್ತಿರುವ ಕೋಟೆ ಆವರಣ ಈಗ ಮಾದಕ ವ್ಯಸನಿಗಳ ಅಡ್ಡೆಯಾಗುವ ಆತಂಕ ಕಾಣಿಸಿಕೊಂಡಿದೆ ಸಂಜೆಯಾಗುತ್ತಲೇ ಒಳನುಸುಳುವ ಕುಡುಕರು ತಮಗೆ ಎಲ್ಲಿ ಬೇಕೆಂದರಲ್ಲಿ ಕುಳಿತು ಕುಡಿಯುವ ತಾಣವಾಗಿ ಮಾರ್ಪಾಡಾಗುತ್ತಿದೆ.
ಕೊಟೆಯ ರಕ್ಷಣೆ ಸ್ವಚ್ಛತೆ ಕಾರ್ಯದ ಹಿನ್ನೆಲೆಯಲ್ಲಿ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಾಚ್ಯವಸ್ತು ಇಲಾಖೆ ಸ್ಥಳೀಯ ಜನಪ್ರತಿನಿಧಿ ಹಾಗೂ ಜಿಲ್ಲಾಡಳಿತ ಹಾಗೂ ಸರಕಾರ ಎಚ್ಚೆತ್ತು ಕತ್ತಲಲ್ಲಿ ಮುಳುಗುವ ಐತಿಹಾಸಿಕ ಕೋಟೆಗೆ ಅಭಿವೃದ್ಧಿ ಎಂಬ ಬೆಳಕು ನೀಡಬೇಕಿದೆ. ಸಾರ್ವಜನಿಕ ವಲಯದಿಂದ ಒತ್ತಾಯ ಕೇಳಿಬಂದಿದೆ.
ವರದಿ:- ಮಂಜುನಾಥ ಕುಂಬಾರ