Ad imageAd image
- Advertisement -  - Advertisement -  - Advertisement - 

ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಅವರ “ಹುಲಿಬೀರ” ಚಲನಚಿತ್ರಕ್ಕೆ ಕೋಟೆನಗರಿ , ಕಲಾವಿದರ ಆಯ್ಕೆ ಪ್ರಕ್ರಿಯೆ. (ಆಡಿಷನ್)

Bharath Vaibhav
ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ ಅವರ “ಹುಲಿಬೀರ” ಚಲನಚಿತ್ರಕ್ಕೆ ಕೋಟೆನಗರಿ , ಕಲಾವಿದರ ಆಯ್ಕೆ ಪ್ರಕ್ರಿಯೆ. (ಆಡಿಷನ್)
WhatsApp Group Join Now
Telegram Group Join Now

ಬಾಗಲಕೋಟೆ:-ಕನ್ನಡ ಚಲನಚಿತ್ರ ರಂಗದಲ್ಲಿ ಮದರಂಗಿ ಹಿಟ್ ಚಿತ್ರವನ್ನು “ಡಾರ್ಲಿಂಗ್ ಡಾರ್ಲಿಂಗ್ ಕಮ್ ಕಮ್ ಡಾರ್ಲಿಂಗ್” ಎನ್ನುವ ಹಿಟ್ ಹಾಡನ್ನು ಕೊಟ್ಟ ನಿರ್ದೇಶನ ಮಾಡಿದ ಮದರಂಗಿ ಮಲ್ಲಿಕಾರ್ಜುನ್ ಎಂದೇ ಖ್ಯಾತಿ ಪಡೆದ ಮಲ್ಲಿಕಾರ್ಜುನ್ ಮುತ್ತಲಗೇರಿ ಅವರು ಈಗ ಮತ್ತೊಂದು ವಿಶಿಷ್ಟ ಕಥಾಹಂದರವುಳ್ಳ ಚಿತ್ರವನ್ನು ನಿರ್ದೇಶನ ಮಾಡಲು ಹೊರಟಿದ್ದಾರೆ.

ಸಾಯಿ ಸ್ಟಾರ್ ಸಿನಿಮಾಸ್ ನ ದಾವಲಸಾಹೇಬ ಹುನಸಿಮರದ ನಿರ್ಮಾಪಕರಾಗಿರುವ ಚಿತ್ರದ ಹೆಸರು ” ಹುಲಿಬೀರ” ಪಕ್ಕಾ ಹಳ್ಳಿ ಸೊಗಡಿನಲ್ಲಿ ಪ್ರಾರಂಭವಾಗುವ ಈ ಚಿತ್ರ ಹಳ್ಳಿ ಹುಡುಗನ ಸುತ್ತ ಕಥೆ ಹೆನೆದಿದ್ದು ಮಾಸ್ ಚಿತ್ರವಾಗಿದ್ದು ವಿಶಿಷ್ಟ ಕಥಾ ಹಂದರವನ್ನು ಒಳಗೊಂಡಿದೆ ಎಂದು ಕಥೆಯ ಒಂದೇ ಎಳೆಯನ್ನು ನಿರ್ದೇಶಕರು ಹೇಳಿದರು.
ಇನ್ನು ಚಿತ್ರೀಕರಣ ನವೆಂಬರ್ ತಿಂಗಳಿನಲ್ಲಿ ಪ್ರಾರಂಭವಾಗಲಿದ್ದು ಚಿತ್ರೀಕರಣದ ಪ್ರತೀಶತ 80% ಚಿತ್ರೀಕರಣವನ್ನು ಬಾಗಲಕೋಟೆ ಜಿಲ್ಲೆಯಲ್ಲಿಯೇ ಅದರಲ್ಲೂ ಬಾದಾಮಿ ತಾಲೂಕಿನಲ್ಲಿ ಹೆಚ್ಚು ಚಿತ್ರೀಕರಣವಾಗಲಿದೆ ಎಂದು ಮಾಹಿತಿ ತಿಳಿಸಿದರು.

ಮದರಂಗಿ ಮಲ್ಲಿಕಾರ್ಜುನ್ ಅವರು ಮೂಲತಹ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದವರು. ತಮ್ಮ ತಾಲ್ಲೂಕಿನಲ್ಲಿಯೇ ಚಿತ್ರೀಕರಣ ಮಾಡುತ್ತಿರುವುದು ಇನ್ನೂ ಹೆಚ್ಚಿನ ಖುಷಿ ತಂದಿದೆ ಎಂದರು. ಇನ್ನು ಹುಲಿಬೀರ ಚಿತ್ರದ ನಿರ್ಮಾಪಕರು ದಾವಲಸಾಹೇಬ ಹುನಸಿಮರದ, ಅವರು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನು “ಹುಲಿಬೀರ” ಚಲನಚಿತ್ರದ ನಿರ್ದೇಶಕ ಮದರಂಗಿ ಮಲ್ಲಿಕಾರ್ಜುನ್ ಸಹ ನಿರ್ದೇಶಕರಾದ ಸಿದ್ದು ಗಾಡಗೋಳಿ, ಛಾಯಾಗ್ರಾಹಕ ಸನಾತನ, ನಿರ್ದೇಶನ ತಂಡದವರಾದ ನವೀನ್ ಹಿರೇಮಠ,ಶ್ರೀಕಾಂತ ಹಳಕಟ್ಟಿ,ವೀರು ಬಾದಾಮಿ, ಆರೀಶ್, ಹಾಜರಿದ್ದರು.

ಬಾಗಲಕೋಟೆಯ ಜ್ಯುನಿಯರ್ ಉಪೇಂದ್ರ ಆರ್. ಡಿ. ಬಾಬು ಅವರು “ಹುಲಿಬೀರಾ” ಚಿತ್ರದ ನಿರ್ದೇಶಕರಾದ ಮದರಂಗಿ ಮಲ್ಲಿಕಾರ್ಜುನ್ ಅವರಿಗೆ ಹಾಗೂ ನಾಯಕನಟ ಅಂಜನ್ ಅವರಿಗೂ ಶಾಲು ಹೊಡಿಸಿ ಸನ್ಮಾನ ಮಾಡಿ ಗೌರವಿಸಿ ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ “ಹುಲಿಬೀರ”” ಚಿತ್ರತಂಡಕ್ಕೆ ತಿಳಿಸಿದರು. ಇದೇ ಸಂದರ್ಭದಲ್ಲಿ ಬಾಗಲಕೋಟೆಯ ವಾಸವಿ ಚಿತ್ರಮಂದಿರದ ಮಾಲೀಕರು ಕೂಡ ಉಪಸ್ಥಿತರಿದ್ದರು.

“ಹುಲಿಬೀರ” ಚಲನಚಿತ್ರ ದ ನಾಯಕ ನಟನಾಗಿ ಅಂಜನ್( ರೂರಲ್ ಅಂಜನ್ ) ಅವರು ಈ ಹಿಂದೆ ಯರ್ರಾಬಿರ್ರಿ ಚಲನಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿದ್ದಾರೆ. ಇನ್ನುಳಿದ ಕಲಾವಿದರ ಆಯ್ಕೆ ಕೋಟೆ ನಗರಿ ಬಾಗಲಕೋಟೆಯ ಡಾ! ಅಂಬೇಡ್ಕರ್ ಭವನದಲ್ಲಿ ನಡೆಯಿತು. ಎಲ್ಲಾ ವಯೋಮಾನದವರು ಕಲಾವಿದರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ತಮ್ಮ ಅಭಿನಯವನ್ನು ಮಾಡಿ ( ಆಡಿಷನ್) ನಲ್ಲಿ ಭಾಗವಹಿಸಿದ್ದರು.
ಇನ್ನು ಚಿತ್ರಕ್ಕೆ ಉತ್ತರ ಕರ್ನಾಟಕದವರಿಗೆ ಮೊದಲ ಆದ್ಯತೆ ನೀಡುತ್ತಿರುವುದು ವಿಶೇಷವಾಗಿರತಕ್ಕಂತ ಸಂಗತಿ.

ಇದುವರೆಗೂ ಉತ್ತರ ಕರ್ನಾಟಕ ಭಾಷೆಯನ್ನು ಇಲ್ಲಿನ ಸೊಗಡನ್ನು ಯಾರೂ ಕೂಡ ಸರಿಯಾಗಿ ಬಳಿಸಿಕೊಂಡಿಲ್ಲ ನಮ್ಮ “ಹುಲಿಬೀರ” ಚಲನಚಿತ್ರಕ್ಕೆ ಉತ್ತರ ಕರ್ನಾಟಕ ಭಾಷೆ ಇಲ್ಲಿನ ಸೊಗಡನ್ನು ಇಲ್ಲಿನ ಕಲಾವಿದರಿಗೆ ಮೊದಲ ಆದ್ಯತೆ ನೀಡಿ ಅಂತವರನ್ನು ಚಿತ್ರಕ್ಕೆ ಹಾಕಿಕೊಂಡು ಚಿತ್ರವನ್ನು ಮಾಡುತ್ತಿರುವುದು ನಮ್ಮ ಚಿತ್ರದ ವಿಶಿಷ್ಟತೆ ಇದು ಪಕ್ಕಾ ಮಾಸ್ ಚಿತ್ರವಾಗಳಿದ್ದು ಮದರಂಗಿ ಚಿತ್ರದ ಬಳಿಕ ಮಾಸ್ ಚಿತ್ರಕ್ಕೆ ಕೈ ಹಾಕಿದ್ದು ಮದರಂಗಿ ಮಲ್ಲಿಕಾರ್ಜುನ್ ಅವರ ಮಾಸ್ ಚಿತ್ರವನ್ನು ನಿರ್ದೇಶನವನ್ನು ನೋಡಲು ಅವರ ಅಪಾರ ಅಭಿಮಾನಿ ಸಮೂಹವೇ ಬಹು ನಿರೀಕ್ಷೆಯಿಂದ ಕಾಯ್ದು ಕುಳಿತಿದ್ದಾರೆ.

ಮದರಂಗಿ ಮಲ್ಲಿಕಾರ್ಜುನ್ ಅವರು ಸಾಕಷ್ಟು ಸಮಯ ತೆಗೆದುಕೊಂಡು ಕಥೆಯನ್ನು ಬರೆದಿದ್ದು ಚಿತ್ರಕ್ಕಾಗಿ ಸಾಕಷ್ಟು ತಾಲೀಮು ನಡೆಸಿ ತಂಡ ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದು ಗಂಡುಮೆಟ್ಟಿನ ನಾಡು ಕೋಟೆ ನಗರಿ ಬಾಗಲಕೋಟೆ ಜಿಲ್ಲೆಯ ಚಾಲುಕ್ಯರಾಳಿದ ನಾಡು ದಕ್ಷಿಣಾಪಥೇಶ್ವರ ಇಮ್ಮಡಿ ಪುಳಿಕೇಶಿಯ ಬೀಡು ಬಾದಾಮಿ ಸುತ್ತಮುತ್ತಲ ಚಿತ್ರೀಕರಣ ನಡೆಸಲು ನಿರ್ಧಾರಿಸಿದ್ದು, ಚಾಲುಕ್ಯರ ಅಧಿದೇವತೆ ನವಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಶ್ರೀ ಬನಶಂಕರಿ ದೇವಿ ದೇವಸ್ಥಾನದಲ್ಲಿ “ಹುಲಿಬೀರ” ಚಲನಚಿತ್ರಕ್ಕೆ ಅದ್ದೂರಿ ಮಹೂರ್ತ ನೆರವೇರಿಸಲಾಗುವುದು ಎಂದು ತಿಳಿಸಿದರು..

ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ

WhatsApp Group Join Now
Telegram Group Join Now
Share This Article
error: Content is protected !!