Ad imageAd image

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನವನ್ನು ಬಿಡುತ್ತೇನೆ : ಕೆ. ಎನ್ ರಾಜಣ್ಣ 

Bharath Vaibhav
ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನವನ್ನು ಬಿಡುತ್ತೇನೆ : ಕೆ. ಎನ್ ರಾಜಣ್ಣ 
WhatsApp Group Join Now
Telegram Group Join Now

ಬೆಂಗಳೂರು : ಬರುವ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಇಂದು ಬೆಳಿಗ್ಗೆ ಸಹಕಾರ ಸಚಿವ ರಾಜಣ್ಣ ಸ್ಫೋಟಕವಾದ ಹೇಳಿಕೆ ನೀಡಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ನಾನು ಮಂತ್ರಿ ಸ್ಥಾನ ಬಿಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದು ಸತ್ಯ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೆ ಸಚಿವ ಸ್ಥಾನವನ್ನು ಬಿಡುತ್ತೇನೆ.

ನಾನು ಯಾವತ್ತೂ ಅಧಿಕಾರವನ್ನು ಕೇಳಿಲ್ಲ. ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುವ ಶಕ್ತಿ ನನಗೆ ಜನ ಕೊಟ್ಟಿದ್ದಾರೆ. ಸಿಎಂ ಸ್ಥಾನ ಬದಲಾವಣೆ ಆಗಬಹುದು ಆಗದೇ ಇರಬಹುದು ಎಂದು ಸಚಿವ ಕೆ. ಎನ್ ರಾಜಣ್ಣ ಹೇಳಿಕೆ ನೀಡಿದರು.

ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆ ಕುರಿತಂತೆ ಆಗಸ್ಟ್ ತಿಂಗಳಲ್ಲಿ ಕ್ರಾಂತಿ ಆಗುತ್ತೆ ಅಂತ ಹೇಳಿಲ್ವಾ? ಯಾವ ಕ್ರಾಂತಿ ಅಂತ ಹೇಳಿದರೆ ಆಸಕ್ತಿ ಹೋಗಿಬಿಡುತ್ತದೆ. ಪಕ್ಷದ ಅಥವಾ ಸರ್ಕಾರದ ಮಟ್ಟದಲ್ಲಿ ಕ್ರಾಂತಿನ ಎಂಬ ವಿಚಾರವಾಗಿ, ಯಾವ ರೀತಿ ಬೇಕಾದರೂ ಯೋಚನೆ ಮಾಡಬಹುದು ರಾಜಕಾರಣ ನಿಂತ ನೀರಲ್ಲ. ಅದು ಸದಾಕಾಲ ಹರಿಯುವ ನೀರು ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!