ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ವಿಳಂಬ ನೇಮಕಾತಿ ಪ್ರಕ್ರಿಯೆಗೆ ಹೆಸರುವಾಸಿ. ಇದಕ್ಕೆ ಉದಾಹರಣೆ ಎನ್ನುವಂತೆ ಕೋರ್ಟ್ ಆದೇಶದ ಮೇರೆಗೆ ಬರೋಬ್ಬರಿ 19 ವರ್ಷಗಳ ಹಿಂದಿನ ಮೋಟಾರು ವಾಹನ ನಿರೀಕ್ಷೆಕರ ಹುದ್ದೆಯ ನೇಮಕಾತಿಗೆ ಮರು ಚಾಲನೆ ನೀಡಿದೆ.
ಬಹುತೇಕ 2 ದಶಕಗಳ ಬಳಿಕ ಕರ್ನಾಟಕ ಲೋಕಸೇವಾ ಆಯೋಗವು ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಮರು ಚಾಲನೆಯನ್ನು ಕೋರ್ಟ್ ಆದೇಶದ ಮೇಲೆ ನೀಡಿದೆ.
ಈಗ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಂತ ಅಭ್ಯರ್ಥಿಗಳಿಗೆ ಆಸಕ್ತಿ ಇದೆಯೋ ಇಲ್ಲವೋ ಅಥವಾ ನಿವೃತ್ತರಾಗಿದ್ದಾರೋ ಬದುಕಿದ್ದಾರೋ ಎಂಬುದೇ ತಿಳಯದು.
2006ರ ಆಗಸ್ಟ್ ನಲ್ಲಿ ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು.
ಶೈಕ್ಷಣಿಕ ಅರ್ಹತೆ ವಿಚಾರವಾಗಿ ಅಸ್ಪಷ್ಟತೆ ಕಾರಣ ಅಭ್ಯರ್ಥಿಗಳು ಆಡಳಿತ ನ್ಯಾಯಮಂಡಳಿ ಮೊರೆ ಹೋಗಿದ್ದರು. ಆ ಬಳಿಕ ಪ್ರಕರಣ ತಾರ್ಕಿಕ ಅಂತ್ಯಕಾರಣದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಈಗ ಸುಧೀರ್ಘ ವಿಚಾರಣೆಯ ಬಳಿಕ ಇದೇ ಫೆಬ್ರವರಿಯಲ್ಲಿ ಮಧ್ಯಂತರ ಆದೇಶ ನೀಡಿದ್ದು, ನೇಮಕಾತಿ ಪ್ರಕ್ರಿಯೆ ಪ್ರಶ್ಸಿರುವ ಎಲ್ಲಾ ಅಭ್ಯರ್ಥಿಗಳ ದೂರುಗಳನ್ನು ಪರಿಶೀಲನೆ ನಡೆಸುವಂತೆ ಕೆಪಿಎಸ್ಸಿಗೆ ನಿರ್ದೇಶನ ನೀಡಿದೆ.
ಈ ಹಿನ್ನಲೆಯಲ್ಲಿ 2006ರ ಅಧಿಸೂಚನೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಯಲು ಆಸಕ್ತಿ ಇದ್ದಲ್ಲಿ ಮಾರ್ಚ್ 24ರ ಒಳಗೆ ಕೆಪಿಎಸ್ಸಿಗೆ ಅರ್ಜಿ ಸಲ್ಲಿಸಬೇಕೆಂದು ಪ್ರಕಟಣೆ ಹೊರಡಿಸಿದೆ.