ಅರಸೀಕೆರೆ: ತಾಲ್ಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ ಹಂಸಿತಾ ಮೌದ್ಗಲ್ಯ :ಪಿ ಸಿ ಎಮ್ ಸಿಎಸ್ ವಿಭಾಗದಲ್ಲಿ ರಾಜ್ಯಕ್ಕೆ, ಜಿಲ್ಲೆಗೆ ಪ್ರಥಮ ರ‌್ಯಾಂಕ್ 64 ವಿದ್ಯಾರ್ಥಿಗಳು 95% ಗಿಂತ ಅಧಿಕ ಅಂಕ ಗಳಿಸಿ ಚೊಚ್ಚಲ ಸಾಧನೆ ಬರೆದ ಕೆಪಿಎಸ್ ಪಿಯು ಕಾಲೇಜು,
2025 26 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅರಸೀಕೆರೆಯ ಕೆಪಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಕುಮಾರಿ ಹಂಸಿತಾ ಮೌದ್ಗಲ್ಯ 593(98.83)ಅಂಕಗಳನ್ನು ಗಳಿಸುವುದರೊಂದಿಗೆ ತಾಲೂಕಿಗೆ ಪ್ರಥಮ ರ‌್ಯಾಂಕ್ ಹಾಗೂ ರಾಜ್ಯಕ್ಕೆ 7ನೇ ರ‌್ಯಾಂಕ್ ಗಳಿಸಿಕೊಂಡಿದ್ದಾರೆ. ಹಾಗೂ ಕುಮಾರಿ ಗೀತಾ ಬಿ ಎಂ 592(98.67) ಅಂಕಗಳೊಂದಿಗೆ ಕಾಲೇಜಿಗೆ 2ನೇ ರ‌್ಯಾಂಕ್ ರಾಜ್ಯಕ್ಕೆ 8ನೇ ರ‌್ಯಾಂಕ್, ಧನ್ಯ ಎಂ ಆರ್ 591 (98.50), ಯಶವಂತ್ ಎ ಪಿ 589 (98.17), ಯಶಸ್ವಿನಿ ಬಿ ಆರ್ 588 (98.00), ದೀಪಿಕಾ 587 (97.83), ಅಂಕಿತ ಬಿ ಆರ್ 585(97.50) ಲಿಖಿತ ಬಿ ಯು 585 (97.50) ಪವನ್ ಹೆಚ್ ಬಿ 585 (97.50) ಅಂಕ ಗಳಿಸಿ ಅಭೂತಪೂರ್ವ ಸಾಧನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಕೆಎಮ್ ಶಿವಲಿಂಗೇಗೌಡರು ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುತ್ತಿರುವುದು ಖುಷಿಕರ ಸಂಗತಿ ಮುಂದಿನ ದಿನಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವ ಹಾಗೂ ರಾಜ್ಯಮಟ್ಟದಲ್ಲಿ ಪ್ರಶಸ್ತಿ ದೊರಕಿಸಿ ಕೊಡುವಾಗಿ ಭರವಸೆ ನೀಡಿ ಇಂತಹ ಪ್ರಯತ್ನಗಳಿಂದ ನಮ್ಮ ಅರಸೀಕೆರೆ ತಾಲೂಕಿಗೆ ಹೆಚ್ಚು ಕೀರ್ತಿ ಸಲ್ಲುತ್ತದೆ ಎಂದು ಹೇಳಿದರು.
ಡಿಸ್ಟಿಂಕ್ಷನ್ ಗಳ ವಿವರ ನೋಡಿದರೆ : ಸತತ ಐದು ವರ್ಷಗಳಿಂದಲೂ ಜಿಲ್ಲೆಗೆ ಅತಿ ಹೆಚ್ಚು ಡಿಸ್ಟಿಂಕ್ಷನ್ ಫಲಿತಾಂಶವನ್ನು ನೀಡುತ್ತಿರುವ ಕೆಪಿಎಸ್ ಪದವಿ ಪೂರ್ವ ಕಾಲೇಜು, ಈ ಬಾರಿಯೂ ಡಿಸ್ಟಿಂಕ್ಷನ್ ಗಳ ಸುರಿಮಳೆಗರೆದಿದೆ. 303 ವಿದ್ಯಾರ್ಥಿಗಳ ಪೈಕಿ 236 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
98% – 5 ವಿದ್ಯಾರ್ಥಿಗಳು
95% ರಿಂದ 97% – 60 ವಿದ್ಯಾರ್ಥಿಗಳು
90% ರಿಂದ 94% – 120 ವಿದ್ಯಾರ್ಥಿಗಳು
85% ರಿಂದ 89% – 44 ವಿದ್ಯಾರ್ಥಿಗಳು
80% ರಿಂದ 84% – 33 ವಿದ್ಯಾರ್ಥಿಗಳು
70% ರಿಂದ 79% – 27 ವಿದ್ಯಾರ್ಥಿಗಳು
60% ರಿಂದ 69% -13 ವಿದ್ಯಾರ್ಥಿಗಳು
ಈ ರೀತಿ ಅತ್ಯುತ್ತಮ ಫಲಿತಾಂಶವನ್ನು ಗಳಿಸುವ ಮೂಲಕ ಪೋಷಕರ ಮೊಗದಲ್ಲಿ ಮಂದಹಾಸವನ್ನು ಸ್ಥಿರವಾಗಿಸಿದ್ದಾರೆ.
ಈ ಅಭಿನಂದನಾ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರಾದ ಕೆಎಂ ಶಿವಲಿಂಗೆಗೌಡರು, ಕೆಪಿಎಸ್ ಕಾಲೇಜಿನ ಸಂಸ್ಥಾಪಕರಾದ ಕೆ ಎಸ್ ವಿಶ್ವನಾಥ್ ಹಾಗೂ ಧರ್ಮಪತ್ನಿ ಸಂಧ್ಯಾ ರವರು, ಉಪಾಧ್ಯಕ್ಷರಾದ ದರ್ಶನ್ ಹೆಚ್ ಹೆಚ್ ರವರು, ಕಾರ್ಯದರ್ಶಿಗಳಾದ ಸಚ್ಚಿದಾನಂದ ಎಆರ್ ರವರು, ಪ್ರಾಂಶುಪಾಲರಾದ ಶಿವಪ್ರಸಾದ್ ಜೆ ರವರು, ಕ್ಲಾಸ್ ಒನ್ ಕಂಟ್ರಾಕ್ಟರ್ ಹಾಗೂ ಉದ್ಯಮಿ ಎಂ ನಸ್ರುಲ್ಲಾ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ವರದಿ : ರಾಜು ಅರಸೀಕೆರೆ




