ಸಿಂಧನೂರು ಸುದ್ದಿ — ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ತದ್ವಿರುದ್ಧ ಇರುವುದರಿಂದ ಮರು ಪರೀಕ್ಷೆ ನಡೆಸಬೇಕೆಂದು ವಿದ್ಯಾರ್ಥಿ – ಯುವಜನ ಹಾಗೂ ಜನ ಪರ ಸಂಘಟನೆಗಳು ಮಾನ್ಯ ತಾಸಿಲ್ದಾರರು ಮುಖಾಂತರ ಸನ್ಮಾನ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರಿಗೆ ಆಗ್ರಹ ಮಾಡಲಾಯ್ತು.. ”ಕರ್ನಾಟಕ ಲೋಕಸೇವಾ ಆಯೋಗವು 384 ಗೆಜೆಟೆಡ್ ಪ್ರೊಬೇ ಷನರಿ ಹುದ್ದೆಗಳು ನೇಮಕಾತಿಗಾಗಿ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಆಗಿರುವ ತಪ್ಪುಗಳು ಬಯಲಾಗಿದೆ ಎರಡು ಪ್ರಶ್ನೆ ಪತ್ರಿಕೆಗಳಲ್ಲೂ ಹಲವಾರು ತಪ್ಪುಗಳು ನುಸುಳಿದ್ದು ಕೆಲವು ಪ್ರಶ್ನೆಗಳು ಮತ್ತು ಉತ್ತರ ಆಯ್ಕೆಗಳು ಇಂಗ್ಲೀಷಿನಲ್ಲಿ ತಪ್ಪು ಹೇಳಿಕೆಗಳು ಯಾವ್ಯಾವು ಎಂದು ಕೇಳಿದರೆ ಕನ್ನಡದಲ್ಲಿ ಸರಿ ಹೇಳಿಕೆಗಳು ಯಾವ್ಯಾವು ಎಂದು ಹೇಳಲಾಗಿದೆ ಹಾಗೆ ಇಂಗ್ಲಿಷ್ ನಲ್ಲಿ ಅತ್ಯಂತ ಭಾರದ ಪಕ್ಷಿಗಳಲ್ಲಿ ಒಂದು ಎಂದು ಹೇಳಿದ್ದಾರೆ ಕನ್ನಡಕ್ಕೆ ಅನುವಾದ ಮಾಡುವಾಗ ವೇಗವಾಗಿ ಹಾರಾಡುವ ಪಕ್ಷಿ ಎಂದು ಉಲ್ಲೇಖವಾಗಿದೆ ಹಾಗೆ ಒಟ್ಟಾರೆ ಪ್ರಶ್ನೆ ಪತ್ರಿಕೆಯಲ್ಲಿ ಇಂಗ್ಲಿಷ್ ಅನುವಾದ ಅರ್ಥಗಳನ್ನು ತದ್ವಿರುದ್ಧವಾಗಿ ಇರುವುದು ಬಹಳಷ್ಟು ಜನ ಅಭ್ಯರ್ಥಿಗಳು ಅನುತ್ತೀರ್ಣರಾಗುವ ಆತಂಕ ಇರುವುದರಿಂದ ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ ಕೇಂದ್ರ ಸೂಕ್ತವಾದ ಮನವರಿಕೆ ಮಾಡಿ ಮೂರು ಪರೀಕ್ಷೆ ನಡೆಸಲು ಸಲಹೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ – ಮೌನೇಶ್ ಜಾಲವಾಡಗಿ. ಜಿಲ್ಲಾ ಸಂಚಾಲಕರು ರಾಯಚೂರು. ಎಂ ಗಂಗಾಧರ ರಾಜ್ಯ ಸಮಿತಿ ಸದಸ್ಯರು ಸಿಪಿಐ ಎಂಎಲ್) ರೆಡೀ ಸ್ಟಾರ್. ಪಂಪಾಪತಿ ಹಂಚಿನಾಳ. DSS ಮುಖಂಡರು. ಆಲಂ ಭಾಷಾ ಬೂದಿವಾಳ. ಅಧ್ಯಕ್ಷರು DSS ನಗರ ಘಟಕ ಸಿಂಧನೂರು. ಯಮನೂರ ಬಸಾಪುರ ಕೆ. ಮಲ್ಲಪ್ಪ ಎಸ್ ಗೋನಾಳ್. ದಲಿತ ಮುಖಂಡರು. ದಾವಲ್ ಸಾಬ್ ದೊಡ್ಮನಿ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ. ಹೊನ್ನೂರ್ ಕಟ್ಟಿಮನಿ. ಮಹೇಶ್ ಜಿಲ್ಲಾಧ್ಯಕ್ಷರು ದಲಿತ ರಕ್ಷಣಾ ವೇದಿಕೆ. ನರಸಪ್ಪ ಅಮರಾಪುರ ದಲಿತ ವಿದ್ಯಾರ್ಥಿ ಪರಿಷತ್. ಎರಿಸ್ವಾಮಿ ಕುಡುತಿನಿ. ಪ್ರವೀಣ್ ಕುಮಾರ್ ಧುಮುತಿ. ಜಂಬಣ್ಣ ಉಪ್ಪಲ್ಲ ದೊಡ್ಡಿ. ದುರ್ಗೇಶ್ ಕಲ್ಮಂಗಿ. ಎಚ್ ಆರ್ ಹೊಸಮನಿ. ಸಿಪಿಐಲ್. ಹನುಮಂತ ತೋಟಿಯಾಳ. ಇದ್ದರು
ವರದಿ -ಬಸವರಾಜ ಬುಕ್ಕನಹಟ್ಟಿ