Ad imageAd image

ಕೆಆರ್ ಐಡಿಎಲ್ ಇಲಾಖೆಯ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ಪುನಃ ಡಾಂಬರೀಕರಗೆ ಗದ್ದಿಗಿ ಒತ್ತಾಯ

Bharath Vaibhav
ಕೆಆರ್ ಐಡಿಎಲ್ ಇಲಾಖೆಯ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ಪುನಃ ಡಾಂಬರೀಕರಗೆ ಗದ್ದಿಗಿ ಒತ್ತಾಯ
WhatsApp Group Join Now
Telegram Group Join Now

ಗುರುಮಠಕಲ್ : ಗುರುಮಠಕಲ್ ತಾಲೂಕಿನ ಕೆ,ಹೊಸಳ್ಳಿ ಯಿಂದ ಮೋಟನಳ್ಳಿ ವರೆಗೆ ವಾಯಾ ಕೋಟಗೇರಾ ನಡುವೆ ಸಂಪರ್ಕ ಕಲ್ಪಿಸುವ ಸುಮಾರು 2.6 ಕಿ.ಮೀ ಮುಖ್ಯರಸ್ತೆಯು ಕಾಮಗಾರಿ ಮುಗಿದು ತಿಂಗಳು ಕಳೆಯುವಷ್ಟರಲ್ಲಿ ಕಿತ್ತು ಹೋಗಿದ್ದು ಈ ಕಾಮಗಾರಿ ಕಳಪೆ ಕಾಮಗಾರಿಗೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕ ಅಧ್ಯಕ್ಷ ನಾಗೇಶ್ ಗದ್ದಿಗಿ ರವರು ಪತ್ರಿಕೆ ಕೇಳಿಕೆ ನೀಡಿದ್ದಾರೆ.

ಸುಮಾರು ₹2 ಕೋಟಿ ಅನುದಾನದಲ್ಲಿ ಕೆಆರ್ ಐಡಿಎಲ್ ಇಲಾಖೆಯಿಂದ ರಸ್ತೆ ಸುಧಾರಣೆ ಮಾಡಲಾಗಿದೆ. ಆದರೆ ಇಲಾಖೆ ಮಾಡಬೇಕಾದ ಕಾಮಗಾರಿಯು ಹಣದ ಆಸೆಗೆ ಉಪ ಗುತ್ತಿಗೆದಾರರಿಗೆ ಕೆಲಸ ನೀಡಿ ತಮಗೂ ಕೆಲಸಕ್ಕೂ ಸಂಬಂಧವಿಲ್ಲ ಎಂಬಂತೆ ಕೈ ಕಟ್ಟಿ ಕುಳಿತುಕೊಂಡಿದ್ದಾರೆ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ತಿಂಗಳು ಕಳೆಯುವಷ್ಟರಲ್ಲಿ ರಸ್ತೆ ಕಿತ್ತು ಹೋಗಿದೆ. ಇದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ರಸ್ತೆಯಲ್ಲಿ ಬಂದರೆ ಅರ್ಧ ದಾರಿಯಲ್ಲೇ ಪಂಕ್ಚರ್ ಆಗಿ ನಿಲ್ಲುತ್ತಿವೆ. ರಸ್ತೆಗೆ ಹಾಕಿದ ಡಾಂಬರು ಹಪ್ಪಳದಂತೆ ಕಿತ್ತು ಬರುತ್ತಿದೆ.

ರಸ್ತೆಯಲ್ಲಿ ಜಲ್ಲಿ ಕಲ್ಲುಗಳಿದ್ದು ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲಾ ಒಂದು ಅಪಘಾತಗಳು ಸಾಮಾನ್ಯವಾಗಿವೆ. ಜಲ್ಲಿ ಕಲ್ಲುಗಳು ರಸ್ತೆಯಲ್ಲಿ ತೇಲಿದ್ದು ವೃದ್ಧರು ಈ ರಸ್ತೆಯಲ್ಲಿ ಸಂಚಾರ ಮಾಡಲು ಪರದಾಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಜನರು ಪರಿತಪಿಸುತ್ತಿದ್ದರೂ ಅಧಿಕಾರಿಗಳು, ದುರಸ್ತಿ ಕಾರ್ಯಕ್ಕೆ ಮುಂದಾಗಿಲ್ಲ ಕೂಡಲೇ ಹದಗೆಟ್ಟ ರಸ್ತೆಯನ್ನು ಸಂಪೂರ್ಣ ಕಿತ್ತೆಸೆದು ನೂತನ ಗುಣಮಟ್ಟದ ಡಾಂಬರೀಕರಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು

ಈ ಭಾಗದಲ್ಲಿ ಹೆಚ್ಚಿನ ಸಾರಿಗೆ ಬಸ್‌ ಸಂಚಾರವೂ ಇಲ್ಲ. ಜನರು ವೈಯಕ್ತಿಕ ವಾಹನಗಳಲ್ಲೇ ಓಡಾಡುತ್ತಾರೆ. ಈ ಹಿಂದೆಯೇ ಸ್ಥಳೀಯ ಶಾಸಕರಿಗೂ ಕಳಪೆ ರಸ್ತೆ ಕಾಮಗಾರಿ ಕುರಿತು ಸರಿಪಡಿಸಲು ನಮ್ಮ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಗಿತ್ತು ಶಾಸಕರು ಕೂಡ ಅಧಿಕಾರಿಗಳಿಗೆ ಆದಷ್ಟು ಬೇಗ ಗುಣಮಟ್ಟದ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಆದರೂ ಕೂಡ ಅಧಿಕಾರಿಗಳು ಇಲ್ಲಿಯವರೆಗೂ ರಸ್ತೆ ದುರಸ್ತಿ ಮಾಡುತ್ತಿಲ್ಲ ಈ ಕೂಡಲೇ ಹದಗೆಟ್ಟ ರಸ್ತೆಯನ್ನು ಪುನಃ ಡಾಂಬರೀಕರಣ ಮಾಡಬೇಕು ನಿರ್ಲಕ್ಷ್ಯ ಧೋರಣೆ ಅನುಸರಿಸಿದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಘಟನೆ ಗುರುಮಠಕಲ್ ತಾಲೂಕಾ ಅಧ್ಯಕ್ಷರಾದ ನಾಗೇಶ್ ಗದ್ದಿಗಿರವರು ಎಚ್ಚರಿಕೆ ನೀಡಿದ್ದಾರೆ .

ಇದೇ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಕಲವಾರ, ತಾ.ಪ್ರ.ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಕಾರ್ಯಾಧ್ಯಕ್ಷ ನರಸಿಂಹಲು ಗಂಗಾನೋಳ, ಕಾಶಪ್ಪ ಬೋಯಾ, ರಾಮುಲು ಕೊಡಗಂಟಿ, ಅವಿನಾಶ್ ಗೌಡ, ಎಸ್,ಪಿ,ಮಹೇಶ್ ಗೌಡ, ಮಲ್ಲಿಕಾರ್ಜುನ ಚೆಪಟ್ಲ, ಉದಯಕುಮಾರ್ ಕೊಂಕಲ್, ಆಯಾಝ್ ಅಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ರವಿ ಬುರನೋಳ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!