ಬೆಂಗಳೂರು: ಪೀಣ್ಯ ದಾಸರಹಳ್ಳಿ ಸಮಿತಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ : ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆ ಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂದು ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು -ಸಂತರು -ದಾಸರು ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂದು ಕನ್ನಡ ಸೇನೆ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಕೆ.ಆರ್ ಕುಮಾರ್ ಹೇಳಿದರು.
ಕರ್ನಾಟಕ ಸೇನೆ ಕರ್ನಾಟಕ ಮಾರಾಪ್ಪನ ಪಾಳ್ಯಾ ವಾರ್ಡಿನ ಶಾಖೆ ಕಚೇರಿಯನ್ನು ಅಧ್ಯಕ್ಷ ಅಬ್ದುಲ್ ರಹೀಂ (ಮುನ್ನ), ಉಪಾಧ್ಯಕ್ಷ ದೀಪಕ್ ಸೇರಿದಂತೆ ಪದಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕಚೇರಿ ಉದ್ಘಾಟನೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಕನ್ನಡ ಸೇನೆ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಕೆ.ಆರ್ ಕುಮಾರ್ ಮಾತಾಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಕೆ. ಗೋಪಾಲಯ್ಯ ಮಾತನಾಡಿ ನಮ ನಾಡಿನಲ್ಲಿ ಹೊರ ರಾಜ್ಯಗಳಿಂದ ಬಂದು ತಮ್ಮ ತಮ ಉದ್ಯೋಗ ಮತ್ತು ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ ಆದರೆ ತಮ್ಮ ಭಾಷೆ ಮನೆಯಲ್ಲಿ ಬೆಳೆಸಿಕೊಳ್ಳಿ ವ್ಯವಹಾರಕ್ಕೆ ಕನ್ನಡ ಮಾತನಾಡಿರಿ ಎಂದು ಶಾಸಕ ಗೋಪಾಲಯ್ಯ ಕನ್ನಡ ಸೇನೆ ಕರ್ನಾಟಕ ಕಚೇರಿ ಉದ್ಘಾಟನೆ ಸಮಾರಂಭ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಭಾಗವಹಿಸಿದ್ದರು.
ಕನ್ನಡ ಸೇನೆ ಕರ್ನಾಟಕ ಮಾರಾಪ್ಪನ ಪಾಳ್ಯಾ ವಾರ್ಡಿನ ಅಧ್ಯಕ್ಷ ಅಬ್ದುಲ್ ರಹೀಂ (ಮುನ್ನ) ಸರ್ವರಿಗೂ ಸ್ವಾಗತ ಕೋರಿದರು. ಉಪಾಧ್ಯಕ್ಷ ದೀಪಕ್ ಅವರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮುನಿರಾಜು, ಕಾರ್ಮಿಕ ಘಟಕದ ಅಧ್ಯಕ್ಷ ಪ್ರತಾಪ್,ಮಾಜಿ ಪಾಲಿಕೆ ಸದಸ್ಯ ಮಹಾದೇವ, ಮುನಿಕೃಷ್ಣ, ಪುಟ್ಟಸ್ವಾಮಿ,ಚಿಕ್ಕೆ ಗೌಡ್ರು, ಮಹಾಂತೇಶ್, ರಾಜಶೇಖರ್,ಗಿರೀಶ್ ಗೌಡ್ರು, ತೇಜಸ್ ಕುಮಾರ್ ಸೇರಿದಂತೆ ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್