ನಂದಗಡ:- ಕ್ರಾಂತಿ ನೆಲ ಕಿತ್ತೂರು ನಾಡಿನ ಪ್ರಮುಖ ಸ್ಥಳ ಖಾನಾಪುರ ತಾಲ್ಲೂಕಿನ ನಂದಗಡವು ವೀರ ರಾಣಿ ಕಿತ್ತೂರು ಚನ್ನಮ್ಮನವರು ಬಲಗೈ ಬಂಟ ವೀರ ಸಂಗೊಳ್ಳಿ ರಾಯಣ್ಣ ಹಾಗೂ ವೀರರ ಹುತಾತ್ಮ ಸ್ಥಳವಾಗಿದ್ದು. ನಿನ್ನೆ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳು ಆದ ಸಿದ್ದರಾಮಯ್ಯ ಹಾಗೂ ಪೂಜ್ಯ ಕನಕಗುರು ಪೀಠದ ನಿರಂಜನ ಪುರಿ ಸ್ವಾಮೀಜಿ ವಿವಿಧ ಇಲಾಖೆಗಳ ಸಚಿವರುಗಳು ಆದ ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ಭೈರತಿ ಸುರೇಶ್, ಲಕ್ಸ್ಮಿ ಹೆಬ್ಬಾಳಕರ್ ಸೇರಿದಂತೆ ಶಾಸಕರು ವಿಠಲ ಹಲಗೇಕರ್, ಕಿತ್ತೂರು ಶಾಸಕ ಬಾಬಾ ಸಾಹೇಬ್ ಪಾಟೀಲ್ ಎಲ್ಲಾ ಶಾಸಕರು ಹಾಗೂ ಮಾಜಿ ಶಾಸಕರು ಆದ ಅಂಜಲಿ ನಿಂಬಾಲಕರ್, ಅರವಿಂದ ಪಾಟೀಲ್ ಹಾಗೂ ಅಧಿಕಾರಿಗಳ ಅಮೃತ ಹಸ್ತದಿಂದ ಅದ್ದೂರಿಯಾಗಿ ಉದ್ಘಾಟನೆ ಗೊಂಡವು. ಕಾರ್ಯಕ್ರಮ ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಡೆಸಿದ ಸಂವಾದದಲ್ಲಿ ಮಾತನಾಡಿದ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ಎಚ್.ಎಂ ರೇವಣ್ಣನವರು ಮಾತನಾಡಿ ಈ ಅಭಿವೃದ್ಧಿ ಕಾಮಗಾರಿ, ಹಾಗೂ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸನ್ಮಾನ ಸ್ವೀಕರಿಸಿ ಭಾಷಣ ಮಾಡಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಿರಿಯ ನಿವೃತ್ತ ಅಧಿಕಾರಿಗಳು ರಾಮಯ್ಯ, ರಾಮಪ್ಪ ಹಾಗೂ ಕಮಿಷನರ್ ಶಾಲಿನಿ ಸೇರಿದಂತೆ ಅಪಾರವಾದ ಜನಸ್ತೋಮ ಈ ಕಾರ್ಯಕ್ರಮದಲ್ಲಿ ನೆರೆದಿತ್ತು. ಇದೇ ಸಂದರ್ಭದಲ್ಲಿ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜುರವರು ನಂದಗಡದ ದುರ್ಗಾಡಿ ಕೋಟೆ ಅಭಿವೃದ್ಧಿ ಪಡಿಸುವುದು ಹಾಗೂ ಹಲಸಿಯಲ್ಲಿ ಕದಂಬ ಉತ್ಸವವನ್ನು ಪ್ರತಿ ವರ್ಷ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆದ ಎಚ್.ಎಂ ರೇವಣ್ಣನವರ ಮೂಲಕ ಮನವಿ ಸಲ್ಲಿಸಿದರು.
ವರದಿ:- ಬಸವರಾಜು




