ಡೋರಿ : ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರು ಕೇಳಿದ್ರೆ ಕ್ರಾಂತಿಯ ಕಿಚ್ಚು ಹೊತ್ತಿಸುತ್ತದೆ. ವಿಶೇಷವಾಗಿ ದಕ್ಶಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಹೆಸರು ಅಂದ್ರೆ ಇದೇ ನೋಡ್ರಿ ಸಂಗೊಳ್ಳಿ ರಾಯಣ್ಣ. ಇನ್ನೂ ಸಂಗೊಳ್ಳಿ ರಾಯಣ್ಣನವರು ಒಬ್ಬ ಕ್ರಾಂತಿಕಾರಿ ಹೋರಾಟಗಾರನಾಗಿ ವೀರ ರಾಣಿ ಕಿತ್ತೂರು ಚನ್ನಮ್ಮನವರ ಬಲಗೈ ಬಂಟನಾಗಿ ಈ ನೆಲನ ಸಂರಕ್ಷಣೆ ಹಾಗೂ ಸ್ವಾಭಿಮಾನದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಯ ಕಹಳೆ ಊದಿ ಬ್ರಿಟಿಷ್ ಸೈನಿಕರಿಗೆ ಚಳ್ಳೆ ತಿನ್ನಿಸಿದ್ದು ಇದೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಬಂಟರು. ಅಷ್ಟಕ್ಕೂ ಈ ಸ್ಟೋರಿ ಏನಪ್ಪಾ ಅಂದ್ರೆ ಕರ್ನಾಟಕ ಸರ್ಕಾರಗಳು ವೀರ ಸಂಗೊಳ್ಳಿ ರಾಯಣ್ಣ ಹುಟ್ಟೂರು ಸಂಗೊಳ್ಳಿ ಹಾಗೂ ಹುತಾತ್ಮ ಸ್ಥಳ ನಂದಗಡದ ಅಭಿವೃದ್ಧಿ ಹೆಚ್ಚು ಮಹತ್ವ ಕೊಟ್ಟಿದ್ದು ಬಿಟ್ರೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಅಡಗುತಾಣ ಹಾಗೂ ಹಾಟ್ ಫೇವರಿಟ್ ಸ್ಥಳವಾಗಿದ್ದ ಡೋರಿ ಸೇರಿದಂತೆ ಹಲವಾರು ಸ್ಥಳಗಳನ್ನು ಅಭಿವೃದ್ಧಿ ಪಡಿಸುವುದರಲ್ಲಿ ವಿಫಲವಾಯಿತು ಎಂದೇ ಹೇಳಬಹುದು.
ಯಾಕಂದ್ರೆ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ಬರೀ ಹುಟ್ಟೂರು ಹಾಗೂ ಹುತಾತ್ಮ ಸ್ಥಳದ ಅಭಿವೃದ್ಧಿಗೆ ಮಹತ್ವ ನೀಡಲಾಗಿದೆ. ಆದ್ರೆ ಸಂಗೊಳ್ಳಿ ರಾಯಣ್ಣನವರ ಹೋರಾಟಗಳ ಇತಿಹಾಸ ಕೆದಕಿದಾಗ ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಈ ಡೋರಿ ಹಳ್ಳವು ಸಹ ಒಂದು. ಅಷ್ಟಕ್ಕೂ ಈ ಡೋರಿ ಹಳ್ಳ ಬರುವುದು ಧಾರವಾಡ ಜಿಲ್ಲೆಯ ಅಳ್ನವಾರ ತಾಲ್ಲೂಕಿನ ಡೋರಿ ಗ್ರಾಮದ ಹೊರವಲಯದಲ್ಲಿ ಹರಿದು ಹೋಗುವ ಹಳ್ಳ. ಬ್ರಿಟಿಷರ ವಿರುದ್ದದ ಹೋರಾಟದ ಸಂದರ್ಭದಲ್ಲಿ ವೀರ ಸಂಗೊಳ್ಳಿ ರಾಯಣ್ಣನವರ ಅಡಗುತಾಣಗಳ ಹಾಟ್ ಫೇವರಿಟ್ ಸ್ಥಳ ಇದಾಗಿತ್ತು ಎಂಬುದಕ್ಕೆ ಸಾಕಷ್ಟು ಕುರುಹುಗಳು ಈಗಲೂ ಸಹ ಇಲ್ಲಿ ಒತ್ತಿ ಹೇಳುತ್ತವೆ ಹಾಗೂ ಇಲ್ಲಿನ ಹಳೆ ತಲೆಮಾರಿನ ಜನರಲ್ಲಿ ಈ ಕಥೆಗಳು ಅಚ್ಚಳಿಯದೇ ಉಳಿದಿವೆ.
ಸಂಗೊಳ್ಳಿ ರಾಯಣ್ಣನವರು ಕಿತ್ತೂರು ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ 1831 ನೇ ಇಸವಿಗಿಂತ ಮುಂಚೆ ತುಂಬಾ ಸಲ ಕುದುರೆ ಮೇಲೆ ತನ್ನ ಸಹಚರರ ಜೊತೆ ತುಂಬಾ ಬಂದು ಇಲ್ಲಿ ವಿಶ್ರಾಂತಿ ಮಾಡುವುದು, ಇಲ್ಲಿರುವ ಹಳ್ಳದಲ್ಲೇ ಸ್ನಾನ ಮಾಡುವುದು ಹಾಗೂ ಧ್ಯಾನ ಮಾಡುವುದು ಮತ್ತು ಹೋರಾಟಗಾರರ ಸಭೆ ನಡೆಸುವುದು ಮಾಡುತ್ತಿದ್ದರಂತೆ. 1831 ಜನವರಿ 26 ರಂದು ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ಹುತಾತ್ಮ ರಾಗುದಕ್ಕಿಂತ ಮುಂಚೆ ಈ ಸ್ಥಳವು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನವರ ಅಡಗುತಾಣಗಳಲ್ಲಿ ಹಾಟ್ ಫೇವರಿಟ್ ಸ್ಥಳ ಈ ಡೋರಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ತನ್ನ ಸಂಬಂದಿಕನೆ ಕುತಂತ್ರ ಮಾಡಿ ಕೆಲ ಸ್ಥಳೀಯರೊಂದಿಗೆ ಕೈ ಜೋಡಿಸಿ ಬ್ರಿಟಿಷರೊಂದಿಗೆ ಸೇರಿ ವೀರ ಸಂಗೊಳ್ಳಿ ರಾಯಣ್ಣನವರನ್ನು ಇದೇ ಸ್ಥಳದಲ್ಲಿ ಸೆರೆ ಹಿಡಿಯಲಾಯಿತಂತೆ..! ಆದ್ರೇ ಅದ್ಯಾಕೋ ಏನೋ ಗೊತ್ತಾಗುತ್ತಿಲ್ಲಾ ಇಲ್ಲಿಯವರೆಗೂ ಸಹ ಯಾವುದೇ ಸರ್ಕಾರಗಳು, ಜನಪ್ರತಿನಿಧಿಗಳು ಮತ್ತು ಪ್ರಗತಿಪರರು ಈ ಐತಿಹಾಸಿಕ ಡೋರಿ ಹಳ್ಳ ಹಾಗೂ ಸ್ಮಾರಕಗಳ ಬಗ್ಗೆ ಧ್ವನಿ ಎತ್ತದೇ ಇರುವುದು ತುಂಬಾ ವಿಪರ್ಯಾಸದ ಸಂಗತಿ.
ಇನ್ನೂ ಈ ಸ್ಥಳಕ್ಕೆ ಬರುವುದಕ್ಕೆ ರಸ್ತೆಯು ಇಲ್ಲದಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಆದ್ದರಿಂದ ಪ್ರಸ್ತುತ ಹುಟ್ಟೂರು ಸಂಗೊಳ್ಳಿ ಯಲ್ಲಿ ರಾಯಣ್ಣನವರ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಇದರ ನಿಮಿತ್ಯ ಈ ಸಂಶೋಧನಾ ವರದಿಯನ್ನು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಈ ಸ್ಥಳಕ್ಕೆ ಭೇಟಿಕೊಟ್ಟು ಸಮಗ್ರವಾಗಿ ವರದಿ ತಯಾರಿಸಿ ಕರ್ನಾಟಕ ಸರ್ಕಾರದ ಹಾಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಆದ Hm ರೇವಣ್ಣ ಹಾಗೂ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಶಾಲಿನಿಯವರಿಗೆ ಕರೆ ಮಾಡಿ ಈ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿ ಈ ಸಂಶೋಧನಾ ವರದಿಯನ್ನು ಬೆಳಕಿಗೆ ತಂದಿದ್ದಾರೆ. ಇನ್ನಾದರೂ ಈ ಐತಿಹಾಸಿಕ ಸ್ಥಳಕ್ಕೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ: ಬಸವರಾಜು.