ಸಿರುಗುಪ್ಪ : ಸ್ವಾತಂತ್ರ್ಯಕ್ಕಾಗಿ ತಮ್ಮ ಮರಣವನ್ನೇ ಮೆಟ್ಟಿ ನಿಂತು ಬ್ರಿಟಿಷರ ವಿರದ್ದ ಹೋರಾಟ ಮಾಡಿದ ಕೆಚ್ಚೆದೆಗೆ ವೀರ, ಸಂಗೊಳ್ಳಿ ರಾಯಣ್ಣರ ಆದರ್ಶಗಳನ್ನು ಪಾಲಿಸಬೇಕು.
ಅವರಂತೆ ಸಮಾಜದ ರಕ್ಷಣೆಗಾಗಿ ಹೋರಾಟ ಮಾಡಬೇಕಿದೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆಯ ತಾಲೂಕಾಧ್ಯಕ್ಷ ಎಮ್.ಹನುಮೇಶ ಕುಮಾರ್ ತಿಳಿಸಿದರು.
ರಾಯಣ್ಣರ ಹುತಾತ್ಮ ದಿನಾಚರಣೆ ನಿಮಿತ್ತ ರಾಯಣ್ಣ ಸೇನೆ ಹಾಗೂ ತಾಲೂಕು ಕುರುಬರ ಸಂಘದ ವತಿಯಿಂದ ನಗರದ ಹೊರವಲಯದಲ್ಲಿರುವ ಸಂಗೊಳ್ಳಿ ರಾಯಣ್ಣ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು. ದೀಪ ಬೆಳಗಿಸಿ ಮೌನಾಚರಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.
ತಾಲೂಕು ಕುರುಬರ ಸಂಘದ ತಾಲೂಕಾಧ್ಯಕ್ಷ ದಮ್ಮೂರು ಸೋಮಪ್ಪ ಅವರು ಮಾತನಾಡಿ ರಾಯಣ್ಣರಂತಹ ಶೂರತನ, ವೀರತನ, ದೇಶಾಭಿಮಾನ, ಪ್ರತಿಯೊಬ್ಬ ಭಾರತೀಯನಿಗೂ ಆದರ್ಶವಾಗಿದೆ. ಅವರು ನಮ್ಮ ಜನಾಂಗದಲ್ಲಿ ಹುಟ್ಟಿರುವುದೇ ನಮ್ಮ ಹೆಮ್ಮೆಯ ವಿಷಯವಾಗಿದೆ. ನಾವೆಲ್ಲಾ ಅವರ ಆದರ್ಶನವನ್ನು ನಮ್ಮ ಜೀವನಲ್ಲಿ ಅಳವಡಿಸಿಕೊಳ್ಳಬೇಕು.
ಮುಖಂಡರಾದ ದೇವಲಾಪುರ ಮಾರೆಪ್ಪ ಮಾತನಾಡಿ ನಮ್ಮ ಜನಾಂಗವು ಆರ್ಥಿಕ ಮತ್ತು ಶೈಕ್ಷಣಿಕ ಮತ್ತು ರಾಜಕೀಯವಾಗಿ ಮುನ್ನೆಲೆಗೆ ಬರಬೇಕಾದರೆ ರಾಯಣ್ಣನವರ ಹಾದಿಯಲ್ಲೇ ನಾವೆಲ್ಲಾ ಸಮಾಜದ ಮೀಸಲಾತಿಗಾಗಿ ಹೋರಾಟಕ್ಕೆ ಮುಂದಾಗಬೇಕೆಂದರು.
ಇದೇ ವೇಳೆ ತಾಲೂಕು ಕುರುಬರ ಸಂಘದ ಉಪಾಧ್ಯಕ್ಷ ವುಲ್ತಿ ಭೀಮಣ್ಣ, ಖಜಾಂಚಿ ಪೂಜಾರಿ ಪ್ಯಾಟೆಪ್ಪ, ಮುಖಂಡರಾದ ಚಂದ್ರಶೇಖರ್, ದಂಡಿ ಭೀರಪ್ಪ, ಕಂಪ್ಲಿ ವೀರೇಶ, ಅನಿಲ್, ಶೇಖರಪ್ಪ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




