ಚಿತ್ರದುರ್ಗ: ಕೇಂದ್ರದ ಜನಗಣತಿ ಪೂರ್ಣವಾಗುವವರೆಗೆ ರಾಜ್ಯದಲ್ಲಿ ಯಾವುದೇ ಹೊಸ ಜಿಲ್ಲೆ ಅಥವಾ ತಾಲೂಕುಗಳ ರಚನೆಯಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಜನಗಣತಿ ಪೂರ್ಣಗೊಳ್ಳದೆ ಯಾವುದೇ ಆಡಳಿತಾತ್ಮಕ ಗಡಿ ಗುರುತಿಗೆ ಕೇಂದ್ರದ ನಿರ್ಬಂಧವಿದೆ.ಹೀಗಾಗಿ ಗಣತಿ ಪ್ರಕ್ರಿಯೆ ಪೂರ್ಣವಾಗದೆ ರಾಜ್ಯದಲ್ಲಿ ಹೊಸ ಕಂದಾಯ ಘಟಕಗಳ ರಚನೆ ಇಲ್ಲ ಎಂದು ತಿಳಿಸಿದ್ದಾರೆ.
2017- 2020ರ ಅವಧಿಯಲ್ಲಿ ರಚನೆಯಾಗಿದ್ದ 63 ಹೊಸ ತಾಲೂಕುಗಳಲ್ಲಿ ತಹಶೀಲ್ದಾರ್ ಸಹಿತ ಮೂಲ ಸೌಕರ್ಯಗಳ ಕೊರತೆ ಇತ್ತು.
ಇವುಗಳಲ್ಲಿ 14 ತಾಲ್ಲೂಕುಗಳಿಗೆ ಆಡಳಿತ ಭವನ ನಿರ್ಮಿಸಲಾಗಿದ್ದು, ಉಳಿದ 49 ತಾಲ್ಲೂಕುಗಳಿಗೆ ಪ್ರಜಾಸೌಧ ಹೆಸರಿನಲ್ಲಿ ತಾಲೂಕು ಕಚೇರಿ ಕಟ್ಟಡಗಳ ನಿರ್ಮಾಣ ಒಂದೂವರೆ ವರ್ಷದಲ್ಲಿ ಪೂರ್ಣವಾಗಲಿದೆ ಎಂದು ಹೇಳಿದ್ದಾರೆ.




