ಯಳಂದೂರು: ಪಟ್ಟಣದ ಶ್ರೀಮತಿ ಸುಂದರಮ್ಮ ದುಗ್ಗಹಟ್ಟಿವೀರಭದ್ರಪ್ಪ ಸ್ಮಾರಕ ವಿದ್ಯಾ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆ ಮಾಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕರಾದ ಕೆವಿ ವೀರಭದ್ರ ಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು ನಂತರ ಮಾತಾಡಿದ ಅವರು ಮಕ್ಕಳು ದೇವರ ಸಮಾನರು ಅವರು ಕೃಷ್ಣ ಬಾಲಕನಗಿದಾಗ ತುಂಟಾಟ ಆಡುತಿದ್ದ ಅವನತೆ ಈ ಮಕ್ಕಳು ವೇಷ ಧರಿಸಿ ಚೆನ್ನಾಗಿ ಕಾಣುತಿದಾರೆ ಎಂದು ತಿಳಿಸಿದರು. ಸಹ ಶಿಕ್ಷಕರು ಬರಹಗರಾದ ಗುಂಬಳ್ಳಿ ಬಸವರಾಜು ರವರು ಕೃಷ್ಣನ ಮೂರ್ತಿಗೆ ಪುಸ್ವರ್ಚನೆ ಮಾಡಿ ಕಾರ್ಯಕ್ರಮಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷಧರಿಸಿ ನೃತ್ಯ, ಹಾಡುಗಳನ್ನು ಹೇಳುವುದರ ಮೂಲಕ ಕಾರ್ಯಕ್ರಮದಲ್ಲಿ ಮೆರಗು ಹೆಚ್ಚಿಸಿದರು. ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.




