ಭಾಲ್ಕಿ : ತಾಲೂಕಿನ ಹಜನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಕೃಷ್ಣಕಾಂತ ಸಕ್ರೆಪ್ಪನೋರ ಮತ್ತು ಉಪಾಧ್ಯಕ್ಷರಾಗಿ ಬಸಮ್ಮ ನಾಮದೇವ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯ ಗುರುಗಳಾದ ಗುಂಡಯ್ಯಾ ಸ್ವಾಮಿ ತಿಳಿಸಿದ್ದಾರೆ.
ಶಾಲೆಯಲ್ಲಿ ಎಸ್ ಡಿಎಂಸಿ ರಚನೆಯ ಸಭೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಕೃಷ್ಣಕಾಂತ ಸಕ್ರೆಪ್ಪನೊರ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಡಲಾಗುವುದು ಎಂದರು.
ನಿಟ್ಟೂರ(ಬಿ ) ಗ್ರಾಮ ಪಂಚಾಯತ ಅಧ್ಯಕ್ಷರಾದ ಅನಿಲಕುಮಾರ ಸಕ್ರೆಪ್ಪನೊರ,ಸದಸ್ಯರಾದ ಧನರಾಜ ಸಕ್ರೆಪ್ಪನೋರ,ವೆಂಕಟ ಡೋಗಾಳೆ,ಚಂದ್ರಕಾಂತ ಪೊಲೀಸಪಾಟೀಲ,ಶಿಕ್ಷಕರಾದ ಶಾಂತಕುಮಾರ, ಯಾಶ್ಮಿನಬಾನು, ಕರುಣಮ್ಮಾ,ಸದಸ್ಯರಾದ ರಾಜಕುಮಾರ ಧನಗರ,ನೌನಾಥ ಬೇಲೂರೆ,ರವಿ, ಓಂಕಾರ,ಅನುಸಯ್ಯ, ಸುನೀತಾ,ಪವಿತ್ರಾ ಉಪಸ್ಥಿತರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ್




