ರೈತರ ಜೋಳ ಖರೀದಿ ಮಿತಿಯನ್ನ 20 ಕ್ವಿಂಟಾಲ್ ಗೆ ಹೆಚ್ಚಿಸಿ.ರೈತರಿಗಾಗುವ ಮೋಸ,ಅನ್ಯಾಯವನ್ನು ನಿಲ್ಲಿಸಿ ಕೆ. ಆರ್. ಎಸ್. ಪಕ್ಷ.

Bharath Vaibhav
ರೈತರ ಜೋಳ ಖರೀದಿ ಮಿತಿಯನ್ನ 20 ಕ್ವಿಂಟಾಲ್ ಗೆ ಹೆಚ್ಚಿಸಿ.ರೈತರಿಗಾಗುವ ಮೋಸ,ಅನ್ಯಾಯವನ್ನು ನಿಲ್ಲಿಸಿ ಕೆ. ಆರ್. ಎಸ್. ಪಕ್ಷ.
WhatsApp Group Join Now
Telegram Group Join Now

ಸಿಂಧನೂರು:  ತಾಲೂಕಿನಲ್ಲಿ ಕೆ. ಆರ್‌.ಎಸ್. ಪಕ್ಷದ ವತಿಯಿಂದ ತಹಶೀಲ್ದಾರರು ಸಿಂಧನೂರು ಇವರ ಮುಖಾಂತರ ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ಎಕರೆಗೆ 20 ಕ್ವಿಂಟಲ್ ರಂತೆ ಜೋಳವನ್ನು ಖರೀದಿಸುವಂತೆ ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುದ್ದಿ ಗೋಷ್ಠಿ ಮತ್ತು ಮನವಿಯನ್ನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರಿಗೆ ಮಾಡಲಾಯಿತು.

ಸುದ್ದಿಗೋಷ್ಠಿ ಮತ್ತು ಮನವಿಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಯುವ ಮುಖಂಡ ನಿರುಪಾದಿ ಕೆ ಗೋಮರ್ಸಿ ಪ್ರಸ್ತುತವಾಗಿ ರಾಜ್ಯ ಸರ್ಕಾರವು ಬೆಂಬಲ ಬೆಲೆ ಅಡಿಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಪ್ರತಿ ರೈತರ ಜೋಳವನ್ನು ಎಕರೆಗೆ 10 ಕ್ವಿಂಟಲ್ ರಂತೆ ಖರೀದಿಸುವ ಮಿತಿಯನ್ನು ನಿಗದಿಪಡಿಸಿರುತ್ತದೆ. ಕಲ್ಯಾಣ ಕರ್ನಾಟಕ ಸೇರಿದಂತೆ ವಿಶೇಷವಾಗಿ ಸಿಂಧನೂರು ತಾಲೂಕಿನ ರೈತರು ಈ ಬಾರಿ ಹೆಚ್ಚಿನ ಜೋಳವನ್ನು ಬೆಳೆದಿದ್ದು ಎಕರೆಗೆ 35 ರಿಂದ 40 ಕ್ವಿಂಟಲ್ ಹೆಚ್ಚಿನ ಇಳುವರಿ ಕೂಡ ಬಂದಿರುತ್ತದೆ. ರೈತರು ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಜೋಳವನ್ನು ಮಾರಾಟ ಮಾಡಲು ಪ್ರಸ್ತುತವಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿದ ಕಡಿಮೆ ಮಿತಿಯಿಂದಾಗಿ ಕಂಗಾಲಾಗಿದ್ದಾರೆ. ಈ ಯೋಜನೆ ರೈತರಲ್ಲಿ ನಿರಾಶಕ್ತಿ ಮೂಡಿಸಿದೆ.ಈಗಾಗಲೇ ಜೋಳದ ಕಾಟವು ಪ್ರಕ್ರಿಯೆ ಮುಗಿಯುವ ಹಂತದಲ್ಲಿ ಇದ್ದು, ಬೆಂಬಲ ಬೆಲೆ ಅಡಿಯಲ್ಲಿ ಪ್ರತಿ ರೈತನಿಂದ ಪ್ರತಿ ಎಕರೆಗೆ ಕಳೆದ ವರ್ಷದ ಮಾದರಿಯಂತೆ 20 ಕ್ವಿಂಟಲ್ ಮಾರಾಟ ಮಾಡಲು ನೂತನ ಆದೇಶವನ್ನು ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಹೊರಡಿಸಬೇಕೆಂದು ಒತ್ತಾಯಿಸಿದರು. ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದ್ದು ಖಾಸಗಿ ದಲ್ಲಾಳಿಗಳಿಗೆ, ಮಧ್ಯವರ್ತಿಗಳಿಗೆ ಕಡಿಮೆ ದರಕ್ಕೆ ಜೋಳ ಮಾರಾಟ ಮಾಡುವ ವ್ಯವಸ್ಥೆ ನಿಲ್ಲಿಸಬಹುದು ಎಂದು ತಿಳಿಸಿದರು.

ಸರ್ಕಾರದ ಜೋಳ ಖರೀದಿ ಕೇಂದ್ರದ ನೀತಿ-ನಿಯಮಗಳು,ಉದ್ದೇಶಗಳು ಉಲ್ಲಂಘನೆ ಆಗದಂತೆ ಕಟ್ಟುನಿಟ್ಟದ ಕ್ರಮವಹಿಸಬೇಕು ಹಾಗೂ ತೂಕದಲ್ಲಿ ಮೋಸ,ಅನ್ಯಾಯ, ತಾರತಮ್ಯ ನೀತಿ ಮತ್ತು ಮಧ್ಯವರ್ತಿಗಳ ಹಾವಳಿ ತಡೆಯಲು ಜೋಳ ಖರೀದಿ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು ಎಂದು ಒತ್ತಾಯಿಸಿದರು. ಸಾಲ ಸುಲ ಮಾಡಿ ಹಗಲಿರುಳು ಎನ್ನದೆ ಜೋಳ ಬೆಳೆದ ರೈತನಿಗೆ ಅನ್ಯಾಯವಾಗದಂತೆ 2024-25 ನೇ ಸಾಲಿನಲ್ಲಿ ರೈತರಿಂದ ಖರೀದಿ ಮಾಡಿದ ಜೋಳ ಮತ್ತು ತೊಗರಿ ಹಣವನ್ನು ಆದಷ್ಟು ಶೀಘ್ರಗತಿಯಲ್ಲಿ ಬಿಡುಗಡೆ ಮಾಡಿ ರೈತರಿಗೆ ಆಗುವಂತ ನಷ್ಟ ಕಷ್ಟಗಳನ್ನ ತಪ್ಪಿಸಬೇಕೆಂದು ತಿಳಿಸಿದರು.

ಕೆ ಆರ್ ಎಸ್ ಪಕ್ಷದ ರೈತರ ಪರವಾದ ಮನವಿ ಉಲ್ಲಂಘನೆ ಆದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ರೈತರ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ, ಜಿಲ್ಲಾಡಳಿತದ ವಿರುದ್ಧ, ತಾಲೂಕ ಆಡಳಿತದ ವಿರುದ್ಧ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ನಿರುಪಾದಿ ಕೆ ಗೋಮರ್ಸಿ ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಸಿಂಧನೂರು ತಾಲೂಕ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ತಾಲೂಕ ಕಾರ್ಯದರ್ಶಿಗಳಾದ,ಕೃಷ್ಣ ಸುಕಾಲಪೇಟೆ, ವೀರೇಶ್ ಕೋಟೆ, ಶರಣಪ್ಪ ಬೇರಗೀ, ಚನ್ನಬಸವ ಸೋಮಲಾಪುರ್, ಕಣಪ್ಪ ಜನತಾ ಕಾಲೋನಿ, ಶರಣಯ್ಯ ಸ್ವಾಮಿ ಸೇರಿದಂತೆ ಹಲವಾರು ಮುಖಂಡರು ಭಾಗವಸಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!