Ad imageAd image

ಶಿರಸಿಯಲ್ಲಿ ಕೆ ಆರ್ ಎಸ್ ಪಕ್ಷದ ಲಂಚಮುಕ್ತ ಅಭಿಯಾನ

Bharath Vaibhav
ಶಿರಸಿಯಲ್ಲಿ ಕೆ ಆರ್ ಎಸ್ ಪಕ್ಷದ ಲಂಚಮುಕ್ತ ಅಭಿಯಾನ
WhatsApp Group Join Now
Telegram Group Join Now

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉತ್ತರಕನ್ನಡ ಜಿಲ್ಲಾ ಘಟಕದ ವತಿಯಿಂದ ಶಿರಸಿ ತಾಲೂಕಿನಲ್ಲಿ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ಮಾಡಿ ಸರ್ಕಾರದ ನೀತಿ-ನಿಯಮಗಳು,ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ, ಸರಿಯಾದ ಸಮಯಕ್ಕೆ ಹಾಗೂ ತಲುಪುತ್ತಿದೆಯ ಹಾಗೂ ಸರ್ಕಾರಿ ಅಧಿಕಾರಿಗಳು ಯಾವ ರೂಪದಲ್ಲಿ ಸೇವೆ ನೀಡುತ್ತಿದ್ದಾರೆ ಎನ್ನುವುದರ ಕುರಿತು ಮಾಹಿತಿ ಪಡೆಯುವ ಲಂಚಮುಕ್ತ ಅಭಿಯಾನ ಆಯೋಜಿಸಲಾಗಿತ್ತು.

ಸರ್ಕಾರಿ ಆಸ್ಪತ್ರೆ,ಲೋಕೋಪಯೋಗಿ ಇಲಾಖೆ,ತಹಶೀಲ್ದಾರ್ ಕಚೇರಿ,ನಗರಸಭೆ ಗೆ ಭೇಟಿ ಮಾಡಿ ತಾಲೂಕಿನ ಸಾಮಾಜಿಕ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಸಮಸ್ಯೆಗಳ ಪರಿಹಾರಕ್ಕಾಗಿ ಪಕ್ಷದ ವತಿಯಿಂದ ಒತ್ತಾಯಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಶ್ರೀಮತಿ ರಂಜಿನಿ ಅವರು ಮಾತನಾಡಿ ಈಗಾಗಲೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಲಂಚಮುಕ್ತ, ಬ್ರಷ್ಟಚಾರ ಮುಕ್ತ ಅಭಿಯಾನಗಳನ್ನು ಹಮ್ಮಿಕೊಂಡಿದ್ದು ಜಿಲ್ಲೆಯ,ತಾಲೂಕಿನ ಅಭಿವೃದ್ಧಿಗಾಗಿ ಪಕ್ಷವು ಜನಪರವಾದ ಹೋರಾಟ ಮತ್ತು ಅಭಿಯಾನಗಳನ್ನು ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ಮುಂದಿನ ಎಲ್ಲಾ ಹಂತದ ಚುನಾವಣೆಗಳಲ್ಲಿ ಸ್ಪರ್ಧಿಸಿ ಯುವಕರಿಗೆ,ಬದಲಾವಣೆ ಬಯಸುವ ಎಲ್ಲರಿಗೂ ಪಕ್ಷವು ವಿವಿಧ ಜವಾಬ್ದಾರಿಗಳನ್ನು ನೀಡಿ ನಾಯಕರನ್ನಾಗಿ ರೂಪಿಸಲಾಗುತ್ತಿದೆ.

ಶಿರಸಿ ತಾಲೂಕಿನಲ್ಲಿ ಹಲವಾರು ಕಚೇರಿಗಳಲ್ಲಿ ಜನ ಸಾಮಾನ್ಯರಿಗೆ ಬಿಜೆಪಿ,ಕಾಂಗ್ರೆಸ್ , ಜೆಡಿಎಸ್ ಪಕ್ಷಗಳು ಸರ್ಕಾರದ ಯೋಜನೆಗಳನ್ನು ತಲುಪಿಸುವಲ್ಲಿ ವಿಫಲವಾಗಿ ಕುಟುಂಬ ರಾಜಕಾರಣದಲ್ಲಿ ತೊಡಗಿವೆ ಇದನ್ನು ಬದಲಾಯಿಸಲು ಕೆ ಆರ್ ಎಸ್ ಪಕ್ಷವು ಜಿಲ್ಲಾದ್ಯಂತ ಹಲವಾರು ಕಾರ್ಯಕ್ರಮಗಳನ್ನು,ಅಭಿಯಾನಗಳನ್ನು ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ,ಜಿಲ್ಲಾಧ್ಯಕ್ಷ ವಿನಾಯಕ ನಾಯಕ್,ನೀಲಕಂಠ ಕೆ ಎನ್,ವೆಂಕಟೇಶ್ ವೈದ್ಯ, ಪ್ರದೀಪ್, ರಮೇಶ್ ನಾಯಕ ,ಗಣಪತಿ ನಾಯ್ಕ್,ಸೀತಾರಾಮ ಗೌಡ,ರಮೇಶ್ ನಾಯಕ, ರವಿ ಹೊಸಕಟ್ಟೆ,ಮಂಜುನಾಥ್,ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!