Ad imageAd image

ಪೆನ್‌ ಡ್ರೈವ್‌ ಪ್ರಕರಣ ಇಡೀ ರಾಜ್ಯವೇ ತಲೆತಗಿಸುವ ಕೇಸ್‌ : ಕೆ. ಎಸ್ ಈಶ್ವರಪ್ಪ

Bharath Vaibhav
ಪೆನ್‌ ಡ್ರೈವ್‌ ಪ್ರಕರಣ ಇಡೀ ರಾಜ್ಯವೇ ತಲೆತಗಿಸುವ ಕೇಸ್‌ : ಕೆ. ಎಸ್ ಈಶ್ವರಪ್ಪ
ks eshwarappa
WhatsApp Group Join Now
Telegram Group Join Now

ಬಾಗಲಕೋಟೆ : ಪೆನ್‌ ಡ್ರೈವ್‌ ಪ್ರಕರಣ ಇಡೀ ರಾಜ್ಯವೇ ತಲೆತಗಿಸುವ ಕೇಸ್‌ ಆಗಿದ್ದು, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.‌ ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೆನ್‌ ಡ್ರೈವ್‌ ಪ್ರಕರಣವನ್ನು ಏಕೆ ಸಿಬಿಐಗೆ ಕೊಡುತ್ತಿಲ್ಲ.ಬರೀ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ.

ಸರ್ಕಾರ ನಿರ್ದೋಷಿ ಆಗಬೇಕಾದ್ರೆ ಪ್ರಕರಣವನ್ನು ಸಿಬಿಐಗೆ ಕೊಡಲಿ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತರಲು ಅವಕಾಶ ಕೊಡಬಾರದು, ಜನರಿಂದ ಆಯ್ಕೆಯಾದ ಚುನಾಯಿತ ಸರ್ಕಾರ ಇದೆ ಎಂದರು.

ಚನ್ನಗಿರಿ ಲಾಕಪ್‌ ಡೆತ್‌ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚುತ್ತಿದೆ, ಮೃತ ಆದೀಲ್‌ ತಂದೆಯೇ ಎರಡೆರಡು ಹೇಳಿಕೆ ನೀಡಿದ್ದಾರೆ.

ಒಮ್ಮೆ ಲೋಬಿಪಿಯಿಂದ ಮಗ ಸತ್ತಿದ್ದಾನೆ ಅಂತಾರೆ, ಮತ್ತೊಮ್ಮೆ ಲಾಕಪ್‌ ಡೆತ್‌ ಅಂತಾ ಹೇಳ್ತಾರೆ. ಮುಸ್ಲಿಂ ಅಂದೋಡಣೆ ಪರಿಹಾರ ಘೋಷಣೆ ಮಾಡಬೇಕಿತ್ತು. ರಾಜ್ಯ ಸರ್ಕಾರ ಈವರೆಗೆ ಪರಿಹಾರ ಘೋಷಣೆ ಮಾಡದಿರುವುದು ಆಸಶ್ಚರ್ಯ ತಂದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!