ನವದೆಹಲಿ: ಐಪಿಎಲ್ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಇಂಗ್ಲೆಂಡ್ ಸರಣಿ ಬರಲಿದೆ. ಭಾರತ ತಂಡ ಇಂಗ್ಲೆಂಡಿನಲ್ಲಿ ಪ್ರಮಖವಾಗಿ 5 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

ಜೂನ್ ನಲ್ಲಿ ಈ ಸರಣಿ ಆರಂಭವಾಗಲಿದ್ದು, ಈಗಾಗಲೇ 18 ಸದಸ್ಯರ ಭಾರತ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಸರಣಿಯಲ್ಲಿ ಕೆಲ ಆಟಗಾರರ ಮುಂದಿನ ಕ್ರಿಕೆಟ್ ಭವಿಷ್ಯ ಪ್ರಕಟಗೊಳ್ಳಲಿದೆ. ಈ ಪೈಕಿ ಸ್ಪಿನ್ನರ ಕುಲದೀಪ್ ಯಾದವ್ ಕೂಡ ಸೇರಿದ್ದಾರೆ.
30 ವರ್ಷ ವಯಸ್ಸಿನ ಕುಲದೀಪ್ ಯಾದವ್ ಏಕದಿನ ಹಾಗೂ ಟ್ವೆಂಟಿ- 20 ಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ಈ ವರೆಗೆ ಅವರು ಕೇವಲ 13 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಪರ ಕಣಕ್ಕೆ ಇಳಿದಿದ್ದಾರೆ. ಅಂದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅವರ ಪ್ರದರ್ಶನ ಇನ್ನು ಗಮನ ಸೆಳೆದಿಲ್ಲ. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್ ಗಳ ಗೊಂಚಲು ಬಿಟ್ಟರೆ ಅವರಿಂದ ಹೇಳಿಕೊಳ್ಳುವ ಪ್ರದರ್ಶನ ಬಂದಿಲ್ಲ. ಇದೆಲ್ಲದರ ಮಧ್ಯೆ ಈ ಬಾರಿ ಇಂಗ್ಲೆಂಡಿನಲ್ಲಿ ಕುಲದೀಪ್ ಯಾದವ್ ಕಮಾಲ್ ಮಾಡುವರೇ ಎಂಬುದನ್ನು ಕ್ರಿಕೆಟ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಇದರ ಜತೆಗೆ ಕ್ರಿಕೆಟ್ ಅಭಿಮಾನಿಗಳ ಕೂಡ ಕುಲದೀಪ್ ಯಾದವ್ ಅವರಿಂದ ಉತ್ತಮ ಪ್ರದರ್ಶನವನ್ನು ನೋಡಲು ಕಾಯ್ದು ಕುಳಿತಿದ್ದಾರೆ.




