ರಾಯಚೂರು: ಸಂಸದ, ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರನಾಯಕ್ ಹೇಳಿಕೆ ಮುಡಾ ಪ್ರಕರಣದಲ್ಲಿ ಕುಮಾರ್ ನಾಯಕ್ ಹೆಸರು ಉಲ್ಲೇಖ ವಿಚಾರ ವಿಪಕ್ಷ ನಾಯಕ ಆರ್ ಅಶೋಕ್ ಸಂಸದ ಕುಮಾರ್ ನಾಯಕ್ ರಾಜೀನಾಮೆಗೆ ಆಗ್ರಹ ವಿಚಾರ ರಾಯಚೂರಿನಲ್ಲಿ ಸಂಸದ ಕುಮಾರ್ ನಾಯಕ್ ಪ್ರತಿಕ್ರಿಯೆ.ರಾಜೀನಾಮೆ ಯಾರೂ ಕೇಳ್ತಿಲ್ಲ, ಡೇ ಒನ್ ಇಂದ ಹೇಳ್ತಿದಿನಿ.ನಾನು ಇದರಲ್ಲಿ ಯಾವುದೇ ಕ್ರಿಮಿನಾಲಿಟಿ ಗಮನಿಸಿಲ್ಲ.ವಿಪಕ್ಷದವರು ರಾಜೀನಾಮೆ ಕೇಳ್ತಿದ್ದಾರೆ,ಕೇಳಿದ್ರೆ ನಾನು ಏನು ಹೇಳಲಿ .ನನ್ನ ಸುಮ್ಮನೇ ಪುಗ್ಸಟ್ಟೆ ಯಾರು ಎಂಪಿ ಮಾಡಿಲ್ಲ .ರಾಯಚೂರಿನವರು ನನ್ನನ್ನ ಎಲೆಕ್ಟ್ ಮಾಡಿ ನನಗೆ 80 ಸಾವಿರ ಓಟು ಹಾಕಿ ಕಳುಹಿಸಿದ್ದಾರೆ.ಅವರ ನಂಬಿಕೆಗೆ ಪ್ರೀತಿಗೆ ದ್ರೋಹ ಮಾಡಿಲ್ಲ.ಯಾರೋ ಕೇಳಿದ್ರು ಅಂತ ರಾಜೀನಾಮೆ ಕೊಡೊದಾ.ಅವರು ಕೇಳೋದು ಹೇಗೆ,ನಾನು ಕೊಡೋದು ಹೇಗೆ..?
ಕಾನೂನಾತ್ಮಕವಾಗಿಯೇ ಎಲಿನೇಶನ್ ಮಾಡಿದ್ದೇನೆ ಅಂತ ಕುಮಾರ್ ನಾಯಕ್ ಪ್ರತಿಕ್ರಿಯೆ.ಲೋಕಾಯುಕ್ತ ಅಧಿಕಾರಿಗಳಿಗೆ ಏನು ಕಂಡಿದೆ ಹೇಳಿ ಪೂರ್ತಿ,ಆವಾಗ ನಾನು ಉತ್ತರ ಹೇಳ್ತಿನಿ.ಸಂಪೂರ್ಣವಾಗಿ ನನ್ನ ಬಳಿ ವರದಿ ಬಂದ ಬಳಿಕ ಹೇಳ್ತೇನೆ.ಉಳಿದದ್ದು ಊಹೆ ಮಾಡಿಕೊಡು ಹೇಳೋದು ತಪ್ಪಾಗತ್ತೆ.ಜಿಮೆಟ್ರಿಕಲ್ ಉದಾಹರಣೆ ಪ್ರಕಾರ ಹೇಳಿದಿನಿ.ಒಂದು ದಿಕ್ಕಲ್ಲಿ ನೋಡಿದ್ರೆ ಲೈನ್ ಕಾಣತ್ತೆ,ಮತ್ತೊಂದು ಬದಿಯಲ್ಲಿ ನೋಡಿದ್ರೆ ಪಾಯಿಂಟ್ ಕಾಣತ್ತೆ,ಇದು ಅದೇ ಥರ.ಅವರು ಹೇಗೆ ನಾವು ಮಾಡಿದ್ದು ತಪ್ಪು ಅಂತ ಹೇಳ್ತಿದ್ದಾರೆ..
ನಾವು ಯಾವ ರೀತಿ ಅದು ಹಂಗಲ್ಲ ಅಂತಿವಿ.ಇದರಿಂದ ಇನ್ನೇನಾಯ್ತು ಅಂತ ಹೇಳಲಾಗ್ತಿದೆಯೋ ಅವೆಲ್ಲಾ ಸರಿಯಿಲ್ಲ ವೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ




