Ad imageAd image

ನನ್ನತ್ರ ಇರುವಂತಹ ದಾಖಲೆಗಳು ರಿಲೀಸ್ ಮಾಡಿದ್ರೆ 8 ಮಂದಿ ಮಂತ್ರಿಗಳು ರಾಜೀನಾಮೆ : ಕುಮಾರಸ್ವಾಮಿ 

Bharath Vaibhav
ನನ್ನತ್ರ ಇರುವಂತಹ ದಾಖಲೆಗಳು ರಿಲೀಸ್ ಮಾಡಿದ್ರೆ 8 ಮಂದಿ ಮಂತ್ರಿಗಳು ರಾಜೀನಾಮೆ : ಕುಮಾರಸ್ವಾಮಿ 
HDK
WhatsApp Group Join Now
Telegram Group Join Now

ಬೆಂಗಳೂರು : ಸಿದ್ದರಾಮಯ್ಯನವ್ರೇ ನಿಮ್ಮಿಂದ ಸರ್ಟಿಫಿಕೇಟ್ ಬೇಕಿಲ್ಲ. ತಪ್ಪು ಸಾಬೀತಾದರೆ ನಾನೇ ರಾಜೀನಾಮೆ ಕೊಡ್ತೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕೆಂಡಕಾರಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ,ನಾನು ಇಲ್ಲಿಗೆ ಯಾವುದೇ ತಪ್ಪು ಮಾಡಿ ಬಂದಿಲ್ಲ, ಅಧಿಕಾರದಲ್ಲಿ ಇದ್ದಾಗ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿ ನಾನಲ್ಲ.

ನಿಮ್ಮದು ಬರೀ ದ್ವೇಷದ ರಾಜಕರಣ. ನಿಮ್ಮ ಸಂಪುಟದಲ್ಲಿ ದರೋಡೆಕೊರರೇ ತುಂಬಿದ್ದಾರೆ.ನೀವು ಪಾರದರ್ಶಕ ಆಡಳಿತ ಕೊಡುವುದರಲ್ಲಿ ವಿಫಲರಾಗಿದ್ದೀರಿ ಎಂದು ಟೀಕಿಸಿದರು.

ಗಂಗೇನಹಳ್ಳಿ ಡಿನೋಟಿಫಿಕೇಷನ್ ನಲ್ಲಿ ತಪ್ಪೇ ಮಾಡಿಲ್ಲ. ಯಾವ ಪ್ರಕರಣದಲ್ಲೂ ನನ್ನನ್ನು ಸಿಲುಕಿಸಲಾಗಲ್ಲ. ನಂಗೆ ಭಯವೇ ಇಲ್ಲ. ಕೊತ್ವಾಲನ ಜತೆಗಿದ್ದವರು ಆಡಳಿತ ನಡೆಸ್ತಿದ್ದಾರೆ . ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ದ್ವೇಷ ರಾಜಕಾರಣಕ್ಕೆ ಹೆದರಲ್ಲ. ಯಾವುದೇ ತನಿಖೆ ನಡೆಸಿದರೂ ಏನೂ ಮಾಡೋಕೆ ಆಗೋದಿಲ್ಲ ಅಂತ ಹೇಳಿದ್ದಾರೆ.

ಹಿಟ್ ಅಂಡ್ ರನ್ ಮಾಡೋದಿಲ್ಲ . ದೇವೇಗೌಡ್ರ ಕುಟುಂಬ ಕೆದಕಿದ್ರೆ, ಏನಾಗುತ್ತೆ ಕಾದು ನೋಡಿ. ನನ್ನತ್ರ ಇರುವಂತಹ ದಾಖಲೆಗಳು ರಿಲೀಸ್ ಮಾಡಿದ್ರೆ 8 ಮಂದಿ ಮಂತ್ರಿಗಳು ರಾಜೀನಾಮೆ ನೀಡುತ್ತಾರೆ ಎಂದು ಭವಿಷ್ಯ ನುಡಿದ್ರು. ಸಿದ್ದರಾಮಯ್ಯ ಹೆದರಲ್ಲ ಅಂತಿದ್ದಾರೆ.

ದೇವೇಗೌಡ್ರ ಕಣ್ಣಲ್ಲಿ ನೀರು ಹಾಕಿಸಿದ್ರೆ ಒಳ್ಳೆದಾಗಲ್ಲ. ಈ ಸರ್ಕಾರ ಭಸ್ಮ ಆಗುವ ಕಾಲ ದೂರ ಇಲ್ಲ ಎಂದು ಕಿಡಿಕಾರಿದ್ರು. ಸಿದ್ದರಾಮಯ್ಯ ಗೆ ರಾತ್ರಿ ನಿದ್ದೆ ಬರ್ತಿಲ್ಲ. 2 ಗಂಟೆಗೆ ಎದ್ದು ಡಾಕ್ಟರ್ ಕರೆಸಿ ಮಾತಾಡಿದ್ದಾರೆ. ರಾತ್ರಿ ಎದ್ದವರು ಮಲಗಲು ಹೆಣಗಾಡುತ್ತಿದ್ದಾರೆ. ಇಷ್ಟಾದರೂ ನಾನು ಹೆದರಲ್ಲ,ನಾನು ಹೆದರಲ್ಲ ಎಂದು ಹೇಳಿಕೆ ನೀಡಿ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!