Ad imageAd image

ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸುತ್ತಿದ್ದವರೇ, ಪೆನ್‍ಡ್ರೈವ್ ಬಿಟ್ಟಿದ್ದಾರೆ : ಕುಮಾರಸ್ವಾಮಿ

Bharath Vaibhav
ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸುತ್ತಿದ್ದವರೇ, ಪೆನ್‍ಡ್ರೈವ್ ಬಿಟ್ಟಿದ್ದಾರೆ : ಕುಮಾರಸ್ವಾಮಿ
HDK
WhatsApp Group Join Now
Telegram Group Join Now

ರಾಯಚೂರು: ಹಿಂದೆ ನೀನು ಏನೆಲ್ಲಾ ಮಾಡಿದ್ದೆ ಎನ್ನುವುದು ಲೋಕಕ್ಕೆ ಗೊತ್ತು. ಟೆಂಟ್ʼನಲ್ಲಿ ನೀಲಿಚಿತ್ರ ತೋರಿಸಿಕೊಂಡು ಹಣ ಮಾಡಿದವನು ಆ ವ್ಯಕ್ತಿ. ಆತನಿಗೆ ಅಂಥ ಅನುಭವ ಮೊದಲಿನಿಂದಲೂ ಇದೆ. ಹಿಂದೊಮ್ಮೆ ಒಬ್ಬ ಶಾಸಕನ ಜೀವನದಲ್ಲಿ ಏನೆಲ್ಲಾ ಆಟ ಆಡಿದ, ಹೆಣ್ಮಗಳನ್ನು ಹೇಗೆಲ್ಲಾ ಬಳಸಿಕೊಂಡ ಎನ್ನುವುದು ಗೊತ್ತಿದೆ.

ಪೆನ್ ಡ್ರೈವ್ ಅನ್ನು ಕುಮಾರಸ್ವಾಮಿಯೇ ಬಿಟ್ಟಿರಬೇಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾನೆ. ಅಂಥ ಕೆಟ್ಟ ಅನುಭವ ಇರುವವನೇ ಪೇನ್ ಡ್ರೈವ್ ಬೀದಿಗೆ ಬಿಟ್ಟಿದ್ದಾರೆ ಎಂದು ಡಿಕೆಶಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಕ್ರೋಶ ವ್ಯಕ್ತಪಡಿಸಿದರು.

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಎನ್ ಡಿಎ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸುವ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು ಈ ಸರಕಾರಕ್ಕೆ ಮಾನ ಮರ್ಯಾದೆ ಎನ್ನುವುದು ಇದ್ದರೆ ಪ್ರಕರಣದ ಬಗ್ಗೆಯೂ ನಿಸ್ಪಕ್ಷವಾಗಿ ತನಿಖೆ ನಡೆಸಲಿ.

ಅದೇ ರೀತಿ ಆ ದೃಶ್ಯಗಳಲ್ಲಿರುವ ಹೆಣ್ಮಕ್ಕಳ ಚಿತ್ರಗಳನ್ನು ಬೀದಿ ಬೀದಿಯಲ್ಲಿ ಬಿಕರಿ ಮಾಡಿದ ನೀಚರಿಗೂ ಶಿಕ್ಷೆ ಕೊಡಿಸಲಿ. ನಿಮಗೆ, ನಿಮ್ಮ ಪಕ್ಷಕ್ಕೆ ಹೆಣ್ಮಕ್ಕಳ ಬಗ್ಗೆ ಗೌರವ ಇದ್ದರೆ ಅವರ ಚಿತ್ರಗಳ ಈ ರೀತಿಯಾಗಿ ಮಾರುಕಟ್ಟೆಗೆ ಬಿಟ್ಟು ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಿರಾ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ನಾನು ನೂರಾರು ಬಾರಿ ಹೇಳಿದ್ದೇನೆ, ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು. ಆದರೂ ನೀವು ನನ್ನನ್ನು, ದೇವೇಗೌಡನ್ನು ಟಾರ್ಗೆಟ್ ಮಾಡುತ್ತಿದ್ದೀರಿ.

ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎಳೆದು ತರುತ್ತಿದ್ದೀರಿ. ಪ್ರತಿನಿತ್ಯ ಹೀಗೆ ಹೇಳಿಕೆ ನೀಡುತ್ತಿದ್ದರೆ ಇನ್ನು ತನಿಖಾ ದಳ ಏತಕ್ಕೆ ಬೇಕು? ಹಿಂದೆ ಯಾವ ಯಾವ ಪ್ರಕರಣಕ್ಕೆ SIT ಮಾಡಿಕೊಂಡಿದ್ದಿರಿ? ಯಾವ ಯಾವ ಉದ್ದೇಶಕ್ಕೆ ರಚನೆ ಮಾಡಿಕೊಂಡಿದ್ದಿರಿ? ಅವು ನಡೆಸಿದ ತನಿಖೆಗಳೆಲ್ಲಾ ಏನಾದವು ಎನ್ನುವುದು ನನಗೆ ಗೊತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!