ನವದೆಹಲಿ: ದಿನಾಂಕ 08-ರಂದು ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ನವದೆಹಲಿಯಲ್ಲಿ ನಡೆದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣದ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (HEIs) ‘ಸುಗಮ್ಯ ಭಾರತ ಅಭಿಯಾನ’ (Accessible India Campaign) ಅನುಷ್ಠಾನದ ಕುರಿತು ವಿವಿಧ ಸಚಿವಾಲಯಗಳ ಮೌಖಿಕ ಸಾಕ್ಷ್ಯವನ್ನು ಪರಿಶೀಲಿಸಿದರು.
ಈ ಸಭೆಯ ಮುಖ್ಯ ವಿಷಯಗಳ ಬಗ್ಗೆ ಮಹತ್ವ
ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಾರೀರಿಕ ಸುಗಮ್ಯತೆ (ರ್ಯಾಂಪಗಳು, ಸುಗಮ ಶೌಚಾಲಯಗಳು, ಇತ್ಯಾದಿ)
ಶಿಕ್ಷಣ ಸಾಮಗ್ರಿಗಳು ಮತ್ತು ಡಿಜಿಟಲ್ ಸೌಲಭ್ಯಗಳಲ್ಲಿ ವಿಕಲಾಂಗ ಸ್ನೇಹಿತ ಪ್ರವೇಶ NCERT, UGC ಮತ್ತು ಇತರೆ ಸಂಸ್ಥೆಗಳ ಮಾರ್ಗದರ್ಶನ ಮತ್ತು ನೀತಿಗಳ ಸರ್ಕಾರಿ ಮತ್ತು ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ ಸುಗಮ್ಯತೆ ಮಾನದಂಡಗಳ ಅನುಷ್ಠಾನ ಕುರಿತು ಚರ್ಚಿಸಿ, ದೇಶದ ಎಲ್ಲಾ ವಿಶೇಷ ಚೇತನರಿಗೆ ಸಮಾನ ಅವಕಾಶಗಳನ್ನು ಒದಗಿಸುವ ದಿಶೆಯಲ್ಲಿ ಮೌಖಿಕ ಸಲಹೆಗಳನ್ನು ನೀಡಿದರು.
ವರದಿ: ರಾಜು ಮುಂಡೆ




