ಬಾದಾಮಿ:- ಕುಟಕನಕೇರಿ ಗ್ರಾಮದ ಸರಕಾರ ಪ್ರಾಥಮಿಕ ಶಾಲೆಯಲ್ಲಿ 1:ರಿಂದ 8 ನೇ ವರ್ಗದ ವರೆಗೆ ಪಾಠ ಮಾಡುತ್ತಿರುವ ಶಿಕ್ಷಕ ಶಿಕ್ಷಕಿಯರ ಗೋಳು ಏನೆಂದರೆ ಎಲ್ಲಾ ವಿದ್ಯಾರ್ಥಿಗಳಿಗೆ ಕೋಣೆ ಇಲ್ಲಾ ಎರಡು ಕೋಣೆಗಳು ಶಿತಿಲಗೊಂಡಿದ್ದು ಸಂಬಂಧಪಟ್ಟ ಇಲಾಖೆಯವರಿಗೆ ನಾವು ತಿಳಿಸಿದ್ದೇವೆ ತಾಲೂಕಾ ಪಂಚಾಯತ್ ಇ ಓ ಅವರು ಕೂಡ ವೀಕ್ಷಣೆ ಮಾಡಿದ್ದಾರೆ, ಬಾದಾಮಿ ಶಾಸಕರಾದ ಭೀಮಸೇನ್ ಚಿಮ್ಮಕಟ್ಟಿ ಅವರು ಕೂಡ ಕೂಡಲೇ ಕಟ್ಟಡ ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಆದೇಶ ಮಾಡಿದ್ದರೂ ಕೂಡ ಕೆಲಸ ಮಾತ್ರ ಶುರುವಾಗದೆ ಮಕ್ಕಳು ಶಾಲೆಯ ಹೊರಗೆ ಕೂತು ಅಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾನವಾಗಿ ತುಂಬಾ ದಿನಗಳೇ ಕಳೆದಿವೆ ಎನ್ನಬಹುದು.
ಇಷ್ಟೇ ಅಲ್ಲದೇ ಶಾಲೆಯ ಆವರಣದಲ್ಲಿ ಶಾಲೆ ಅವಧಿ ಮುಗಿದ ಮೇಲೆ ಗ್ರಾಮಸ್ಥರು ಶಾಲೆಯ ಗೇಟ್ ಬೀಗ ಮುರಿದು ಶಾಲೆಯ ಆವರಣದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದು ಇದು ತುಂಬಾ ಖೇದಕರ ಸಂಗತಿ ಎನ್ನಬಹುದು. ಶಾಲೆಯನ್ನು ಕಾಪಾಡಬೇಕಾದ ಗ್ರಾಮಸ್ತರೇ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದರೆ ಕಾಪಾಡೋರು ಯಾರು ಎನ್ನುವ ಪರಿಸ್ಥಿತಿ ಕುಟಕನಕೇರಿ ಗ್ರಾಮದ ಸರಕಾರಿ ಶಾಲೆಯ ಪರಿಸ್ಥಿತಿಯಾಗಿದೆ ಎನ್ನಬಹುದು.
ಶಾಲೆಯಲ್ಲಿ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದೇ ಶಿಕ್ಷಕರು ಪರೀತಪಿಸುವ ಹಾಗೆ ಆಗಿದೆ. ಬಾದಾಮಿ ಶಾಸಕರು ಈ ಬಗ್ಗೆ ಗಮನಹರಿಸಿ ಇಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕಾರವೆಂಬ ಚಾಟಿ ಬೀಸಿದರೆ ಕಾಮಗಾರಿ ಶುರುವಾದರೆ ದೇಶದ ಭವಿಷ್ಯ ಎಂದು ಕರೆಯುವ ವಿದ್ಯಾರ್ಥಿಗಳಿಗೆ ಕೂತು ಕಲಿಯಲು ಸೂರು ಕಲ್ಪಿಸಿಕೊಟ್ಟಂತಾಗುತ್ತದೆ ಎನ್ನುವುದು ನಮ್ಮ ವಾಹಿನಿಯ ಕಳಕಳಿಯಾಗಿದೆ.
ವರದಿ:- ರಾಜೇಶ್. ಎಸ್. ದೇಸಾಯಿ