ಕಂಪ್ಲಿ: -ಬಳ್ಳಾರಿಯ ಸಂತ ಜಾನರ ಪ್ರೌಢಶಾಲೆ (ಕೋಟೆ) ಶಾಲೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜಯನಗರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿ, ವಿಜಯದ ನಗಾರಿ ಬಾರಿಸುವ ಮೂಲಕ ವಿಧ್ಯಾ ಸಂಸ್ಥೆಗೆ ಕೀರ್ತಿ ತಂದಿದ್ದಾರೆ .
ಗಜಲ್ ವಿಭಾಗದಲ್ಲಿ ಬಿಬಿ ಖತೀಜ, ಚರ್ಚಾ ಸ್ಪರ್ಧೆ ವಿಭಾಗದಲ್ಲಿ ಕೆ.ಮೋಕ್ಷಿತ ಹಾಗೂ ಕವ್ವಾಲಿ ವಿಭಾಗದಲ್ಲಿ ಖೈರುನ್ನಿಸ ಮತ್ತು ತಂಡದವರಾದ ಸಬಿಯಾ ಬೇಗಂ, ಬಿಬಿ ಖತೀಜಾ, ಬಿಬಿ ಹಾಜರ, ಸಾನಿ ನಿಶಾ , ಮುಬೀನಾ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು, ಬೋಧಕ – ಬೋಧಕೇತರ ಸಿಬ್ಬಂದಿ ಸೇರಿದಂತೆ ಇತರರು ಹರ್ಷ ವ್ಯಕ್ತ ಪಡಿಸಿದ್ದಾರೆ.




