ಮೊಳಕಾಲ್ಮೂರು:– ಕಾರ್ಮಿಕರ ದಿನಾಚರಣೆಯ ತ್ಯಾಗ ಬಲಿದಾನದ ಪ್ರತೀಕವಾಗಿ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಮಾಡುವುದು ವಾಡಿಕೆಯಾದರೆ ಆದರೆ ಈ ಹೋರಾಟದಿಂದ ಇಂದು ಅನೇಕ ಕಾರ್ಮಿಕರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಜಿಲ್ಲಾ ಸಂಚಾಲಕರು ಕಾಂ ಆನಂದರಾಜ್ ಉದ್ಘಾಟನೆ ಮಾಡಿ ಮಾತನಾಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲ್ಲೂಕು ಸಮಿತಿವತಿಯಿಂದ ಆಯೋಜಿಸಿದ್ದ 139 ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಸುಮಾರು ವರ್ಷಗಳ ಹಿಂದಿನಿಂದ ಖಾರ್ಕಾನೆ ಮಾಲೀಕರು ಬಡ ಕೂಲಿ ಕಾರ್ಮಿಕರಿಂದ 10ರಿಂದ 16 ಗಂಟೆಗಳ ಕಾಲ ದುಡಿಸಿಕೊಂಡು ಕಡಿಮೆ ಕೂಲಿ ಕೊಡುತ್ತಿದ್ದರು. ಇದರಿಂದ ಬೇಸತ್ತ ಕೂಲಿ ಕಾರ್ಮಿಕರು ಹೋರಾಟ ಮಾಡಿ ತಮ್ಮ ಹಕ್ಕು ಪಡೆದು ಕೊಂಡಿದ್ದಾರೆ.ಕಾರ್ಮಿಕರ ಹೋರಾಟದ ಪ್ರತಿಫಲದಿಂದ ಸಂಬಳ ಸಿಗುವಂತಾಗಿದೆ.
ಈಗಲೂ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತರು ಗೌರವ ಧನ ಪಡೆಯುತ್ತಿದ್ದಾರೆ ವಿನಾ ಸಂಬಳ ಪಡೆಯುತ್ತಿಲ್ಲ. ಇವತ್ತು ಅನೇಕ ಜನರು ಇ ಎಫ್ ,ಪಿ ಎಫ್ ಗ್ರಾಜಿಯುಟಿ ಪಡೆಯುತ್ತಿದ್ದಾರೆ ಎಂದರೆ ನಮ್ಮ ಹೋರಾಟದಿಂದ ಎನ್ನುವುದು ಮರೆಯುವಂತಿಲ್ಲ.
ಖಾರ್ಕಾನೆ ಮಾಲೀಕರ ಅನುಕೂಲಕ್ಕೆ ತಕ್ಕಂತೆ ಸರ್ಕಾಗಳು ಸಮೇತ ಸಹಕರಿಸುತ್ತವೆ. ನಾವುಗಳು ಎಲ್ಲರು ಸರ್ಕಾರದ ವಿರುದ್ಧ ದ್ವನಿ ಏತ್ತಿ ಹೋರಾಟ ಮಾಡಿದ್ದಲ್ಲಿ ನಮ್ಮ ಬದುಕು ಬದಲಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂ ಡಿ ಎಂ ಮಲಿಯಪ್ಪ ಅಧ್ಯಕ್ಷತೆವಹಿಸಿದ್ದರು. ಕಾo ದಾನಸೂರ ನಾಯಕ ಉಪಾಧ್ಯಕ್ಷರು ಸಿಐಟಿಯು , ಕಾಂ ಎನ್ ನಿಂಗಮ್ಮ, ಜಿಲ್ಲಾ ಸಂಚಾಲಕರು, ಎಂ ಡಿ ಲತೀಫ್ ಸಾಬ್, ಎಸ್ ರಾಜಶೇಖರ್ ಕಾ ನಿ ಪ ಸಂಘದ ಅಧ್ಯಕ್ಷರು, ಕಾಂ ಶಿವಣ್ಣ, ಕಾಂ ಜ್ಯೋತಿ, ಆಶಾ, ಪಾರ್ವತಮ್ಮ ಹಾಮಾಲಿ ಕಾರ್ಮಿಕರು, ಆಟೋ ರಿಕ್ಷಾ ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ವರದಿ:- ಪಿಎಂ ಗಂಗಾಧರ್