ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚೆಟ್ಟಿನಾಡು ಕಂಪನಿಯಲ್ಲಿ
ದಿನಾಂಕ 17-04-2025 ರಂದು ಸಾವನ್ನಪ್ಪಿದ ಚಿಂಚೋಳಿ ತಾಲೂಕಿನ ಗಣಾಪುರ ಗ್ರಾಮದ ಯೂನಸ್ ಮೋಜಿನ್ ಅವರ ಸಾವಿಗೆ ಚೆಟ್ಟಿನಾಡ್ ಸಿಮೆಂಟ್ ಕಾರ್ಖಾನೆ ಕಾರ್ಮಿಕ ಘಟಕ ವ್ಯವಸ್ಥಾಪಕರು ಮತ್ತು ಗುತ್ತಿಗೆದಾರರ ಲೈಸನ್ಸ್ ರದ್ದು ಪಡಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮೃತ ಯೂನಸ್ ಮೊಜಿನ್ ಕುಟುಂಬಕ್ಕೆ 1ಕೋಟಿ ನಗದು ಹಾಗೂ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಚೆಟ್ಟಿನಾಡ್ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕು ಎಂದು ಯುವ ಕರ್ನಾಟಕ ವೇದಿಕೆ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಸಚಿನ ಚವ್ಹಾಣ ತಿಳಿಸಿದ್ದಾರೆ.