Ad imageAd image

ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗೋಪಾಲ್ ಎಲ್ ಆಕ್ರೋಶ.

Bharath Vaibhav
ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಗೋಪಾಲ್ ಎಲ್ ಆಕ್ರೋಶ.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ತರಗತಿಗಳ ಸ್ವಚ್ಛತೆಯ ಕೊರತೆಯಿದೆ. ಮುಖ್ಯವಾದ ಅಂಶವೆಂದರೆ ರಾಷ್ಟೀಯ ದಿನಾಚರಣೆಗಳ ದಿನದಂದು ಧ್ವಜಾರೋಹಣ ಮಾಡಲು ಧ್ವಜದ ಕಟ್ಟೆಯು ಇಲ್ಲ.ಇದರಿಂದ ಶಿಕ್ಷಣ ಸಂಸ್ಥೆಯಾದ ಈ ಕಾಲೇಜಿನಲ್ಲಿ ಧ್ವಜಾರೋಹಣ ಮಾಡದಿರುವುದು ಬಹಳ ದುಃಖ ಮತ್ತು ಅವಮಾನಕರ ಸಂಗತಿಯಾಗಿದೆ.

ಇದನ್ನು ಗಮನಿಸಿದ ಅಂಬೇಡ್ಕರ್ ಯುವಸೇನೆಯ ತಾಲೂಕ ಅಧ್ಯಕ್ಷರಾದ ಗೋಪಾಲ್ ಎಲ್ ನಾಟೇಕರ್ ಮತ್ತು ಮುಧೋಳ್ ಹೋಬಳಿ ವಲಯದ ಉಪಾಧ್ಯಕ್ಷರಾದ ಕೈಲಾಸ್ ಮೌರ್ಯ ಅವರು ಕಾಲೇಜಿಗೆ ಹೋಗಿ ವಿಚಾರಿಸಿದ್ದರೂ ಸಹ ಸಮಸ್ಯೆಗಳಿಗೆ ಕಾಲೇಜಿನ ಪ್ರಾಂಶುಪಾಲರು ಸ್ಪಂದಿಸುತ್ತಿಲ್ಲ. ಹಾಗೂ ಕಾಲೇಜಿನ ಆವರಣದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪುರಸಭೆಯವರು ಕೂಡಾ ಉಡಾಫೇ ತೋರುತಿದ್ದಾರೆ.ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾಲೇಜಿಗೆ ಸ್ವತಃ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಬೇಕೆಂದು

ಅಂಬೇಡ್ಕರ್ ಯುವ ಸೇನೆಯ ತಾಲೂಕ್ ಅಧ್ಯಕ್ಷರಾದ ಗೋಪಾಲ್ ಎಲ್ ನಾಟೇಕರ್ ಮತ್ತು ಮುಧೋಳ್ ಹೋಬಳಿ ವಲಯದ ಉಪಾಧ್ಯಕ್ಷರಾದ ಕೈಲಾಸ್ ಮೌರ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!