ಕಲಬುರಗಿ: ಕಾಳಗಿ ತಾಲೂಕಿನ ಚಿಂಚೋಳಿ ( ಎಚ್ ) ಗ್ರಾಮ ಪಂಚಾಯತನಲ್ಲಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದೆ, ಬರಿ ಹೆಸರಿಗೆ ಮಾತ್ರ ಗ್ರಾಮ ಪಂಚಾಯತ ತೆರೆದಿಟ್ಟು ಸಿಬ್ಬಂದಿಗಳಿಲ್ಲದೆ ಖಾಲಿ ಖಾಲಿ ಕಂಡಿತ್ತು, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳ ಒದಗಿಸಲು, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸಲು, ಸರ್ವಜನಿಕರ ಕುಂದು ಕೊರತೆ ಕೇಳಲು ಅಧಿಕಾರಿಗಳಿಗೆ ಸಮಯ ಪ್ರಜ್ಞೆ ತುಂಬಾನೆ ಮುಖ್ಯವಾಗಿದೆ.
ಅದರೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡಲು ಇಲ್ಲಿ ಸಂಪೂರ್ಣ ನಿರ್ಲಕ್ಷ ವಹಿಸಿದ್ದು ಕಂಡು ಬರುತ್ತಿದೆ,ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದೆ, ತಮ್ಮ ಮನ ಬಂದಂತೆ ಬರುವುದು ಮನಬಂದಂತೆ ಹೋಗುವುದು ಸುಮಾರು ದಿನಗಳಿಂದ ನಡಿಯುತ್ತ ಬಂದಿದೆ , ಸಾರ್ವಜನಿಕರು ತಮ್ಮ ಸಮಸ್ಯೆಗಳ ತಿಳಿಸಲು ಗ್ರಾಮ ಪಂಚಾಯತಗೆ ಬಂದರೆ, ಯಾರು ಕಾಣದೆ ಸುಮಾರು ಸಮಯದವರೆಗೆ ಕಾದು ಕಾದು ಬೇಸರ ಹೊರಹಾಕಿದರು,
ಈ ಹಿಂದೆ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಕಲ್ಬುರ್ಗಿ ಯುವ ಘಟಕ ಅಧ್ಯಕ್ಷ ಎನ್ ಕೆ ಅರ್ಜುನ್ ಅವರು ಸಿಬ್ಬಂದಿಗಳ ಬೇಜವಾಬ್ದಾರಿ ಸಮಯಯನ್ನು ಕಂಡು, ಕ್ರಮ ಕೈಗೊಳ್ಳವಂತೆ ತಾಲೂಕ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಕೋರಿದರು ಯಾವುದೇ ಕ್ರಮ ಕೈಗೊಂಡಿಲ್ಲ, ಅದರೆ ಮತ್ತೆ ಅದೇ ರೀತಿ ಸಮಯ ಪ್ರಜ್ಞೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿರ್ಲಕ್ಷ ವಹಿಸಿದರೆ, ಆದ್ದರಿಂದ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು, ಒಂದು ವೇಳೆ ಕ್ರಮ ಕೈಗೊಳ್ಳದೆ ಪಕ್ಷದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಕಲ್ಬುರ್ಗಿ ಯುವ ಘಟಕ ಅಧ್ಯಕ್ಷ ಎನ್ ಕೆ ಅರ್ಜುನ್ ಅವರು ತಿಳಿಸಿದರು.
ವರದಿ : ಹಣಮಂತ ಕುಡಹಳ್ಳಿ




