ಐನಾಪುರ: ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಶ್ರೀ ಕೆರಿಸಿದ್ದೇಶ್ವರ ದೇವರ ದೇವಸ್ಥಾನದ ಲಕ್ಷದಿಪೋತ್ಸವ ಹಾಗೂ ಸತ್ಯಸಿದ್ದರ ಭವ್ಯಭೇಟಿ ಕಾರ್ಯಕ್ರಮ ಅತಿ ವಿಜ್ರಂಭಣೆಯಿಂದ ನಡೆಯಿತು.

ಕಾವಲಿ ಮಡ್ಡಿಯಲ್ಲಿ 46 ಕು ಹೆಚ್ಚು ಸತ್ಯಸಿದ್ದರ ದೇವರುಗಳ ಪಲ್ಲಕ್ಕಿಗಳು. ಭಾಗವಹಸಿದ್ದವು.
ಅತಿ ವಿಶಾಲವಾದ ಕಾವಲಿ ಮಡ್ಡಿಯಲ್ಲಿ ದೇವರುಗಳನ್ನು ನೋಡಲು ಜನಸಾಗರ ಹರಿದು ಬಂದಿತ್ತು ಭಂಡಾರದಲ್ಲಿ ಮಿಂದೆದ್ ದೇವರುಗಳನು ನೋಡಿ ಭಕ್ತರು ಭಕ್ತಿಯಿಂದ ಕಣ್ಣು ತುಂಬಿಕೊಂಡರು. ಹಾಗೂ ಈ ಸಂದರ್ಭದಲ್ಲಿ ಪರಮ ಪೂಜ್ಯರು ಗಳೂ ಭಾಗವಹಿಸಿದ್ದರು.
ಹಾಗೂ ಎರಡನೇ ದಿನದಂದು ದೇವರ ಸುತ್ತ ಪವಳಿ ವಾಸ್ತು ಶಾಂತಿ ನಡೆಯಿತು. ಪರಮಪೂಜ್ಯರಿಂದ ಹೋಮ ಹವನ ಮಂತ್ರ ಪಠಣೆ ದೇವಸ್ಥಾನದ ಅಲಂಕಾರ ಅತಿ ಸುಂದರವಾಗಿತ್ತು. ಬಂದಂತ ಭಕ್ತಾದಿಗಳಿಗೆ ಯಾವುದೇ ಕುಂದು ಕೊರತೆ ಆಗದಂತೆ ಅನೇಕ ತರಹದ ಅನ್ನಪ್ರಸಾದವನ್ನು ಭೋಜನ ವ್ಯವಸ್ಥೆ ದೇವಸ್ಥಾನದ ಸೇವಾ ಸಮಿತಿ ನೋಡಿಕೊಂಡರು.
ಅದೇ ದಿನದಂದು ವೇದಿಕೆ ಕಾರ್ಯಕ್ರಮ ಕೂಡ ನಡೆಯಿತು. ಈ ಸಂದರ್ಭದಲ್ಲಿ ಬಂದಂತಹ ಎಲ್ಲ ಪರಮಪೂಜ್ಯರಿಗೆ ಸತ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತಾಡಿದ ಮದುಲಿಂಗ ಪೂಜ್ಯರು ಶ್ರೀಕರಿಸಿದ್ದೇಶ್ವರ ದೇವರು ಒಂದು ಕುದುರೆಯನ್ನು ತಯಾರು ಮಾಡಿದ್ದಾನೆ. ಅದು ಯಾವ ಕುದುರೆ ಎಂದರೆ ರಾಜುಗೌಡ ಪಾಟೀಲ ಎಂದು ಹೇಳಿ ಅವರನ್ನು ಹೊಗಳಿದರು. ಮತ್ತು ಐನಾಪುರ ಗ್ರಾಮಉ ಸಂಸ್ಕಾರ ತುಂಬಿದ ಊರು ಇಲ್ಲಿ ನಡೆಯುತ್ತಿರುವುದು ಬಂಡಾರದ ಜಾತ್ರೆ ಅಲ್ಲ ಬಂಗಾರದ ಜಾತ್ರೆಯಂತೆ ಕಾಣುತ್ತಿದೆ ಎಂದು ಹೇಳಿದರು.
ಮತ್ತು ಹತ್ತೂರ ಪರಮಪೂಜ್ಯ ಮಾತನಾಡಿ,ಸಾಗರ ಹೆ ಬಡಾ ಚಾದರ ಹೇ ಚೋಟಾ, ಐನಾಪುರ ಗ್ರಾಮವು ಮೊದಲು ಜೈನಾಪುರವಾಗಿತ್ತು. ಅಮೋಘಸಿದ್ದರು ಹಾಗೂ ಕರಿಸಿದ್ದೇಶ್ವರ ಆಶೀರ್ವಾದ ಈ ಗ್ರಾಮಕ್ಕೆ ಬಹಳಷ್ಟಿದೆ ಎಂದು ಹೇಳಿದರು.
ಹಾಗೂ ಪರಮಪೂಜ್ಯ ಅಮರೇಶ್ವರ ಮಹಾರಾಜರು ಸಿದ್ಧ ಸಿರಿ ಸಿದ್ದಾಶ್ರಮ ಕವಲಗುಡ್ಡ ಹನುಮಾಪುರ ಇವರಿಗೆ ಸಿದ್ದಯೋಗಿ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಎಲ್ಲ ಭಕ್ತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ಸಂಜೆ ವೇಳೆಗೆ ಪ್ರಾರಂಭವಾಯಿತು. ಎಲ್ಲಿ ನೋಡಿದರಲ್ಲಿ ದೀಪದಗಳು ಕಂಗೊಳಿಸುತ್ತಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ಕೂಡ ಭಾಗವಹಿಸಿದ್ದರು. ಹಾಗೂ ರಾತ್ರಿ ಎಲ್ಲ ಕಲಾವಿದರಿಂದ ಡೊಳ್ಳಿನ ಪದಗಳು ದೇವಸ್ಥಾನದ ಮುಂದೆ ಏರ್ಪಡಿಸಲಾಗಿತ್ತು.
ಮತ್ತು ಕೊನೆಯ ದಿನದಂದು. ಮುಂಜಾನೆ ಬಂದಂತಹ ಅತಿಥಿಗಳಿಗೆ ವೇದಿಕೆಯ ಮೇಲೆ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀಮಂತ ಪಾಟೀಲ ಅವರು ಹಾಜರಿದ್ದರು. ಹಾಗು ಸಂಜೆ ವೇಳೆಗೆ ಸತ್ಯಸಿದ್ಧರ ಅಗಲುವ ಭೇಟಿ ಕಾರ್ಯಕ್ರಮ ಪ್ರಾರಂಭವಾಯಿತು. ಇದನ್ನು ನೋಡಲು ಜನಸಾಗರ ಹರಿದು ಬಂದಿತ್ತು. ನೋಡುವ ಭಕ್ತರಿಗೆ ಮನ ಕಲಕುವಂತಿತ್ತು.
ವರದಿ : ಭರತ ಮೂರಗುಂಡೆ




