ಹಾಸನ : ಜೆಡಿಎಸ್ ಪಕ್ಷದ ಚಿಹ್ನೆ ತೆನೆ ಹೊತ್ತ ಮಹಿಳೆ, ಆದ್ರೆ ಮಹಿಳೆಯರ ಮೇಲೆ ಅವರು ಹೊರೆ ಹಾಕಿದ್ದಾರೆ. ಹೆಣ್ಣಿನ ಶಾಪ ಯಾರನ್ನೂ ಸುಮ್ಮನೇ ಬಿಡುವುದಿಲ್ಲ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ದಳಪತಿಗಳ ವಿರುದ್ಧ ಗುಡುಗಿದರು.
ಇಂದು ನಡೆದ ಜನಕಲ್ಯಾಣ ಸಮಾವೇಶದಲ್ಲಿ ತಮ್ಮ ಭಾಷಣದ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಉಲ್ಲೇಖಿ ವಾಗ್ದಾಳಿ ನಡೆಸಿದ ಅವರು, ಮಹಿಳೆ ಮೇಲೆ ಅವರು ಹೊರೆ ಹೊರಸಿದ್ದು, ಆ ಹೊರೆಯನ್ನು ಇಳಿಸಿ ನಾವು ಮಹಿಳೆಯರಿಗೆ ಸ್ವಾಭಿಮಾನದ ಬದುಕು ಕೊಟ್ಟಿದ್ದೇವೆ.
ಹೆಣ್ಣಿನ ಶಾಪಕ್ಕೆ ಯಾರು ಗುರಿಯಾಗುತ್ತಾರೋ, ಆ ಶಾಪ ಅವರಿಗೆ ಬಿಡದೇ ತಟ್ಟೇ ತಟ್ಟುತ್ತದೆ ಎಂದು ದಳಪತಿಗಳ ಮೇಳೆ ಕಿಡಿಕಾರಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿ ಹೇಳುತ್ತಿದ್ದೇನೆ, ಯಾವ ಹೆಣ್ಣು ಮಕ್ಕಳನ್ನೂ ಯಾರೂ ಅನ್ಯಾಯ ಮಾಡಬಾರದು.
ಹೆಣ್ಣುಮಕ್ಕಳ ತಂಟೆಗೆ ಯಾರೂ ಹೋಗಕೂಡದು. ದ್ರೌಪದಿಯ ತಂಟೆಗೆ ಹೋಗಿದ್ದ ದುಶ್ಯಾಸನ ಕಥೆ ಏನಾಯ್ತು ಎಂಬುವ ಇತಿಹಾಸ ಎಲ್ಲರಿಗೂ ಗೊತ್ತಿದೆ. ಆ ಇತಿಹಾಸವನ್ನು ಯಾರೂ ಮರೆಯಬಾರದು ಎಂದರು.